Thug Life: ‘ಥಗ್ ಲೈಫ್’ ರಿಲೀಸ್ ಗೆ ಸುಪ್ರೀಂ ಅನುಮತಿ – ಆದ್ರೂ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗಲ್ಲ, ಯಾಕೆ?

Thug life : ಕಮಲ್ ಹಾಸನ್ ನಟನೆ ಮತ್ತು ನಿರ್ಮಾಣದ ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ತೋರಿಸಿದೆ. ಆದರೂ ಕೂಡ ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗೋದಿಲ್ಲ. ಯಾಕೆ ಗೊತ್ತಾ?

ಹೌದು, ‘ಥಗ್ ಲೈಫ್’ ಸಿನಿಮಾ ರಿಲೀಸ್ಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ಆದಾಗ್ಯೂ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗೋದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಹಂಚಿಕೆದಾರ ವೆಂಕಟೇಶ್ ನಿರ್ಧಾರ. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನಂತೂ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ಹೇಳಿರುವುದು.
ಅಂದಹಾಗೆ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಲು ವೆಂಕಟೇಶ್ ಎಂಬುವವರು ಮುಂದೆ ಬಂದಿದ್ದರು. ಅವರು ಬರೋಬ್ಬರಿ 8 ಕೋಟಿ ರೂಪಾಯಿಗೆ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದರು. ಆದರೆ, ಈಗಾಗಲೇ ಸಿನಿಮಾ ರಿಲೀಸ್ ವಿಳಂಬ ಆಗಿದೆ. ಸಿನಿಮಾ ಕೂಡ ಚೆನ್ನಾಗಿಲ್ಲ ಎನ್ನುವ ವಿಮರ್ಶೆ ಸಿಕ್ಕಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅವರು ಸಿನಿಮಾನ ರಾಜ್ಯದಲ್ಲಿ ರಿಲೀಸ್ ಮಾಡಿದರೆ ಕೈ ಸುಟ್ಟುಕೊಳ್ಳೋದು ಪಕ್ಕಾ. ಹೀಗಾಗಿ, ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ‘ನಾನು ಈಗ ಸಿನಿಮಾ ರಿಲೀಸ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಅಲ್ಲದೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಪ್ರತಿಕ್ರಿಯಿಸಿದ್ದಾರೆ. ‘ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಏನು ಆದೇಶ ಮಾಡುತ್ತದೆಯೋ ಅದಕ್ಕೆ ನಾವು ತಲೆಬಾಗುತ್ತೇವೆ. ಥಗ್ ಲೈಫ್ ರಿಲೀಸ್ ಮಾಡುವುದಿಲ್ಲ ಎಂದು ನಾವು ಎಂದಿಗೂ ಹೇಳಿಲ್ಲ. ನಾವು ರಿಲೀಸ್ ಮಾಡೋಕೆ ರೆಡಿ ಇಲ್ಲ ಎಂದು ಕಮಲ್ ಹಾಸನ್ ಅವರೇ ಹೇಳಿರೋದು. ಕನ್ನಡಪರ ಸಂಘಟನೆಗಳು, ಸರ್ಕಾರದ ಪರ ನಾವಿರುತ್ತೇವೆ. ವಿತರಕರೇ ಇಲ್ಲಿ ರಿಲೀಸ್ ಮಾಡೋಕೆ ಸಿದ್ಧರಿಲ್ಲ. ರಿಲೀಸ್ ಮಾಡಿ ದುಡ್ಡು ಕಳೆದುಕೊಳ್ಳಲು ಯಾರಿಗೂ ಇಷ್ಟ ಇಲ್ಲ. ಹೀಗಾಗಿ, ಯಾವ ವಿತರಕರು ಮುಂದೆ ಬರುವುದಿಲ್ಲ. ಮುಂದೆ ಬಂದರೆ ಆಗ ನಾವು ಚರ್ಚೆ ಮಾಡಿತ್ತೇವೆ. ಆ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ’ ಎಂದು ನರಸಿಂಹಲು ಹೇಳಿಕೆ ನೀಡಿದ್ದಾರೆ.
Comments are closed.