D K Shivkumar : ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ರಾಜ್ಯದ ಜನರಲ್ಲಿ ವಿಶೇಷ ಮನವಿ ಇಟ್ಟ ಡಿಕೆ ಶಿವಕುಮಾರ್

Share the Article

D K Shivkumar : ಕನ್ನಡದ ಹುಟ್ಟಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದ್ದವು. ಆದರೆ ಈಗ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಈ ಚಿತ್ರ ರಿಲೀಸ್ ಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ಜನರಲ್ಲಿ ವಿಶೇಷ ಮನವಿ ಇಟ್ಟಿದ್ದಾರೆ.

 

ಹೌದು, ಥಗ್ ಲೈಫ್’ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಈ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕನ್ನಡಪರ ಸಂಘಟನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DCM D.K. Shivakumar) ಮನವಿ ಮಾಡಿದ್ದಾರೆ.

 

ಅಲ್ಲದೆ ಕಮಲ್ ಹಾಸನ್ ಕೇಸ್‌ನಲ್ಲಿ ಕೋರ್ಟ್ ಏನು ಆದೇಶ ನೀಡಿದೆಯೋ ಅದನ್ನು ನಾವು ಗೌರವದಿಂದ ಪಾಲನೆ ಮಾಡಬೇಕಿದೆ. ಈ ನಡುವೆ ನಾನು ಕನ್ನಡ ಪರ ಸಂಘಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ನಾವು ಒಂದು ಮಿತಿ ಇಟ್ಟುಕೊಳ್ಳಬೇಕು. ಯಾರು ಕೂಡ ಕಾನೂನೂನನ್ನು ಕೈಗೆ ಎತ್ತಿಕೊಳ್ಳಬಾರದು. ಕರ್ನಾಟಕ ಶಾಂತಿಯ ನಾಡು, ಎಲ್ಲರಿಗೂ ಅವರವರ ಅಭಿಪ್ರಾಯ ಹೇಳುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.

Comments are closed.