Belgavi : ಮಂಜೂರಾದರು ಖಾತೆಗೆ ಬಾರದ ಹಣ – ಗ್ರಾಮ ಪಂಚಾಯಿತಿಯೊಳಗೆ ಎಮ್ಮೆ ತಂದು ಕಟ್ಟಿದ ರೈತ!

Belagavi : ದನದ ಕೊಟ್ಟಿಗೆ ನಿರ್ಮಾಣ ಮಾಡಲು ಸರ್ಕಾರದಿಂದ ಹಣ ಬಿಡುಗಡೆಯಾದರೂ ಕೂಡ ಅದನ್ನು ಗ್ರಾಮ ಪಂಚಾಯಿತಿಯವರು ತನಗೆ ನೀಡಲಿಲ್ಲ ಎಂದು ರೈತನೊಬ್ಬ ಎಮ್ಮೆಯನ್ನು ತಂದು ಗ್ರಾಮ ಪಂಚಾಯಿತಿ ಒಳಗೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ..

ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಈ ಒಂದು ವಿಚಿತ್ರ ಘಟನೆ ನಡೆದಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತ ದನದ ಕೊಟ್ಟಿಗೆ ನಿರ್ಮಾಣಕ್ಕೆ ಹಣ ಮಂಜೂರಾದ ನೆರವಿನ ಹಣ ನೀಡದ ಕಾರಣ, ರೈತ ಸತೀಶ ಕೋಳಿ ಅವರು ಸಂಬರಗಿ ಗ್ರಾಮ ಪಂಚಾಯಿತಿ ಕಚೇರಿ ಒಳಗೆ ಎಮ್ಮೆ ಕಟ್ಟಿ ಅಲ್ಲೇ ಮೇವು ಹಾಕಿದರು ಆಕ್ರೋಶ ವ್ಯಕ್ತಪಡಿಸಿದರು.
ದನದ ಕೊಟ್ಟಿಗೆ ನಿರ್ಮಾಣಕ್ಕೆ ವರ್ಷದ ಹಿಂದೆಯೇ ಸಂಬರಗಿ ಗ್ರಾಮ ಪಂಚಾಯಿತಿಯಿಂದ ನನಗೆ ನೆರವಿನ ಹಣ ಮಂಜೂರಾಗಿದೆ. ₹50 ಸಾವಿರ ವೆಚ್ಚದಲ್ಲಿ ಕೊಟ್ಟಿಗೆ ಕಟ್ಟಿ ವರ್ಷವಾದರೂ ಹಣ ನೀಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿಮಗೆ ಮಂಜೂರು ಮಾಡಿರುವ ಯೋಜನೆ ರದ್ದಾಗಿದೆ ಎಂದು ಹೇಳುತ್ತಾರೆ’ ಎಂದು ರೈತ ಸತೀಶ ದೂರಿದ್ದಾರೆ. ಅಧಿಕಾರಿ ನೀಡಿದ ಭರವಸೆ ಮೇರೆಗೆ ಅವರು ಎಮ್ಮೆಯನ್ನು ಮನೆಗೆ ಒಯ್ದರು.
Comments are closed.