Elephant attack: ಆಹಾರ ಹರಸಿ ಅಂಗಡಿಗೆ ನುಗ್ಗಿದ ಕಾಡಾನೆ – ಮಾವಿನ ಹಣ್ಣು, ಬೆಲ್ಲ ತಿಂದು ಪರಾರಿಯಾದ ಕಳ್ಳಾನೆ

Elephant attack: ಗೋಣಿಕೊಪ್ಪಲು, ಮೈಸೂರು ರಾಜ್ಯ ಹೆದ್ದಾರಿ ದೇವರಪುರದಲ್ಲಿ ಮುಖ್ಯರಸ್ತೆ ಬದಿಯಲ್ಲಿರುವ ಕೂರ್ಗ್ ಸ್ಪೈಸಸ್ ಅಂಡ್ ಹೋಂ ನೀಡ್ಸ್ ಅಂಗಡಿಗೆ ನಿನ್ನೆ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಕಾಡಾನೆಯೊಂದು ಅಂಗಡಿಗೆ ನುಗ್ಗಿದೆ. ಮುಂಭಾಗದಲ್ಲಿರುವ ಹೊದಿಕೆಯನ್ನು ತಳ್ಳಿ ಅಲ್ಲಿರುವ ತರಕಾರಿ ಮಾವಿನ ಹಣ್ಣು ತಿಂದು ಕೆಲವೊಂದನ್ನು ಹೊರ ತೆಗೆದು ಕಾಲಿನಿಂದ ನಾಶಪಡಿಸಿ ನಷ್ಟ ಉಂಟು ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸರೆಯಾಗಿದೆ.

ಕಳೆದೆರಡು ದಿನಗಳಿಂದ ಆನೆ ಅಂಗಡಿ ಸಮೀಪ ಬಂದು ತೆರಳುತ್ತಿದೆ. ಮೈಸೂರು ರಾಜ್ಯ ಹೆದ್ದಾರಿಯಲಿ ರಾತ್ರಿ ವೇಳೆ ಕಾಂಟ್ರಾಕ್ಟ್ ಬಸುಗಳು ಸೇರಿದಂತೆ ಹೆಚ್ಚಿನ ವಾಹನಗಳು ಓಡಾಡುತ್ತಿದ್ದರು ಆನೆ ಇವೆಲ್ಲವನ್ನೂ ಲೆಕ್ಕಿಸದೆ ಈ ಭಾಗದಲ್ಲಿ ಸಂಚರಿಸುತ್ತಿದೆ. ಪ್ರತಿ ವರ್ಷ ಮಳೆಗಾಲ ಅವಧಿಯಲ್ಲಿ ಈ ಭಾಗದಲ್ಲಿ ಆನೆ ರಸ್ತೆ ಮಾರ್ಗವಾಗಿ ಸಂಚರಿಸುವುದು ವಾಡಿಕೆಯಾಗಿದೆ.
Comments are closed.