School Van: ಖಾಸಗಿ ಶಾಲೆ ವಾಹನಗಳ ತಪಾಸಣೆ – ಚಾಲಕರು ಕುಡಿದ್ರೆ ಶಾಲೆಯೇ ಹೊಣೆ – ನಗರ ಪೊಲೀಸ್ ಆಯುಕ್ತ ಎಚ್ಚರಿಕೆ

Share the Article

School Van: ಶಾಲ ವಾಹನಗಳಲ್ಲಿ ಸರಿಯಾದ ಸುರಕ್ಷತೆಗಳನ್ನು ಅನುಸರಿಸಲಾಗುತ್ತಿಲ್ಲ. ಚಾಲಕರು ಕುಡಿದು ವಾಹನಮ ಚಲಾಯಿಸುವುದರ ಬಗ್ಗೆ ದೂರುಗಳು ಅಲ್ಲಲ್ಲಿ ಕೇಳಿ ಬರುತ್ತಿತ್ತು. ಇದರಿಂದ ಅನೇಕ ಅನಾಹುತಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಖಾಸಗಿ ಶಾಲೆ ವಾಹನಗಳ ತಪಾಸಣೆ ನಡೆಸಲಾಯ್ತು. ಶಾಲಾ ಮಕ್ಕಳನ್ನ ಕರೆದೊಯ್ಯುವ ಬಸ್, ವ್ಯಾನ್ ಗಳ ಬಗ್ಗೆ ಸೀರಿಯಸ್ ಆಗಿ ಪರಿಶೀಲನೆ ನಡೆಸಲಾಯ್ತು.

ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತರು ಜನರಿಗೆ, ಸಂಚಾರಕ್ಕೆ ಅಡಚಣೆ ಆಗಬಾರದು ಅಂತಾ ಬೆಳಗ್ಗೆ ತಪಾಸಣೆ ಮಾಡಲಾಗಿದೆ. ಪರಿಶೀಲನೆ ವೇಳೆ ಚಾಲಕರು ಮಿತಿ ಮೀರಿ ಕುಡಿದು ವಾಹನ ಓಡಿಸಿರೋದು ಗೊತ್ತಾಗಿದೆ. ಇದು ತುಂಬಾ ಸೀರಿಯಸ್ ವಿಚಾರ. ಆಯಾ ಖಾಸಗಿ ಸ್ಕೂಲ್ ಅವರಿಗೂ ಕೂಡ ಸೂಚನೆ ನೀಡಲಾಗಿದೆ. 58ಜನ ಕುಡಿದು ವಾಹನ ಓಡಿಸಿರೋದು ಗೊತ್ತಾಗಿದೆ. ರಾತ್ರಿ ಪಾರ್ಟಿ ಮಾಡಿ ಕುಡಿದು ಬೆಳಗ್ಗೆ ವಾಹನ ಓಡಿಸ್ತಾರೆ. ಅವರ ಬಗ್ಗೆ ಕ್ರಮಕ್ಕೆ ಮುಂದಾಗಲಾಗ್ತಿದೆ ಎಂದರು.

ಶಾಲೆಗಳಿಗೆ ಸೂಚನೆ ನೀಡಲಾಗಿದೆ, ಕ್ರಮಕ್ಕೆ ಆರ್ ಟಿಓ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಸಂಬಂದ ಪಟ್ಟ ಶಾಲೆಗೆ ಪತ್ರ ಬರೆಯಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಮುನ್ನೆಚ್ಚರಿಕೆ ಕೊಡದೆ ಹೊದರೆ ಸಂಬಂಧ ಪಟ್ಟ ಶಾಲೆಗಳನ್ನೇ ಹೊಣೆಗಾರರನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

Comments are closed.