D K Shivkumar : ಸೈಕಲ್ ಹೊಡೆಯುತ್ತಾ ವಿಧಾನಸೌಧದ ಮೆಟ್ಟಿಲಲ್ಲಿ ದಢಾರನೆ ಬಿದ್ದ ಡಿಕೆ ಶಿವಕುಮಾರ್!!

D K Shivkumar : ಪರಿಸರ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗ ಸೈಕ್ಲಿಸ್ಟ್ ಗಳೊಂದಿಗೆ ಸೈಕ್ಲಿಂಗ್ ಮಾಡಲು ಹೋಗಿ ಡಿಸಿಎಂ ಡಿಕೆ ಶಿವಕುಮಾರ್ ದಢಾರನೆ ಬಿದ್ದೇ ಬಿಟ್ಟರು. ಸಧ್ಯ ಈ ವಿಡಿಯೋ ಈಗ ವೈರಲ್ ಆಗಿದೆ.

Looks like RCB fans really cursed Karnataka Govt , Look at DCM DK Shivakumar fell from cycle
— Walter VIRAT (@Breakingbadd17) June 17, 2025
ಹೌದು, ಬೆಂಗಳೂರಿನ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ವಿಶ್ವ ಪರಿಸರ ದಿನಾಚರಣೆ -2025 ಪರಿಸರ ನಡಿಗೆಗೆ ಚಾಲನೆ ನೀಡಿದರು. ಈ ವೇಳೆ ವಿಧಾನಸೌಧದ ಪೂರ್ವ ದ್ವಾರದಲ್ಲಿ ಇತರೆ ಸೈಕ್ಲಿಸ್ಟ್ ಗಳ ಜೊತೆ ಡಿಕೆಶಿ ಕೂಡಾ ಸೈಕ್ಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಆದರೆ ಡಿಕೆ ಶಿವಕುಮಾರ್ ಸೈಕ್ಲಿಂಗ್ ಮಾಡುತ್ತಾ ಮೆಟ್ಟಿಲ ಬಳಿ ಬಿದ್ದೆ ಬಿಟ್ಟಿದ್ದಾರೆ.
ತಕ್ಷಣವೇ ಅವರ ಜೊತೆಗಿದ್ದ ಸಹಾಯಕರು ಅವರನ್ನು ಹಿಡಿದು ನಿಲ್ಲಿಸಿದ್ದಾರೆ. ಇದನ್ನು ಅಲ್ಲಿದ್ದ ಮಾಧ್ಯಮದವರು ಸೆರೆ ಹಿಡಿದಿದ್ದನ್ನು ಗಮನಿಸಿದ ಡಿಕೆ ಶಿವಕುಮಾರ್ ಇದನ್ನೆಲ್ಲಾ ಏಯ್ ಇದನ್ನೆಲ್ಲಾ ತೋರಿಸ್ಬೇಡ್ರಪ್ಪಾ ಎಂದು ತಮಾಷೆ ಮಾಡಿದ್ದಾರೆ.
Comments are closed.