Kalaburagi: ಕಲಬುರ್ಗಿಯಲ್ಲಿ ಮನೆಗೋಡೆ ಕುಸಿದು ಹತ್ತು ವರ್ಷದ ಬಾಲಕ ಸಾವು

Kalaburagi: ಅತಿಯಾದ ಮಳೆಗೆ ಮನೆಯ ಗೋಡಿ ಕುಸಿದು ಹತ್ತು ವರ್ಷದ ಬಾಲಕನೊಬ್ಬ ಮೃತ ಪಟ್ಟಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿಯ ಜೇವರ್ಗಿಯ ಗುಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕನನ್ನು ಶಿವಪ್ಪ (10) ಎಂದು ಗುರುತಿಸಲಾಗಿದೆ. ಇನ್ನು ಭಾಗ್ಯಮ್ಮ ಎಂಬ ಮಹಿಳೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Comments are closed.