Vijayapura : ವಿಜಯಪುರದಲ್ಲಿ ಕಲುಷಿತ ನೀರು ಕುಡಿದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Vijayapura: ಕಲುಷಿತ ನೀರನ್ನು ಕುಡಿದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಾನ್ಯರಮಸಲವಾಡ ಗ್ರಾಮದಲ್ಲಿ ನಡೆದಿದೆ.

ಚರಂಡಿ ನೀರು ಮಿಶ್ರಿತವಾಗಿರುವ ಬೋರ್ವೆಲ್ ನೀರು ಕುಡಿದು ಈ ರೀತಿಯಾಗಿದ್ದು, ಅಸ್ವಸ್ಥರು ವಾಂತಿ ಹಾಗೂ ಭೇದಿಯಿಂದ ಬಳಲಿದ್ದಾರೆ. ಇನ್ನು 20 ಜನರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Comments are closed.