Iran: ಲೈವ್‌ ನಲ್ಲಿರುವಾಗಲೇ ಇರಾನ್‌ ನ್ಯೂಸ್‌ ಚಾನೆಲ್‌ ಮೇಲೆ ಇಸ್ರೇಲ್‌ ದಾಳಿ – ಓಟ ಕಿತ್ತ ನಿರೂಪಕಿ !!

Share the Article

Iran: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 4ನೇ ದಿನವಾದ ಸೋಮವಾರ ಮತ್ತಷ್ಟು ತಾರಕಕ್ಕೇರಿದ್ದು ಎರಡೂ ದೇಶಗಳು ಹಗಲು-ರಾತ್ರಿ ದಾಳಿ-ಪ್ರತಿದಾಳಿ ಮುಂದುವರಿಸಿವೆ. ಇರಾನ್‌ ಅಣುಶಕ್ತಿ ಕೇಂದ್ರದ ಮೇಲೆ ಇಸ್ರೇಲ್‌ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಸಹ ಇಸ್ರೇಲ್‌ನ ಟೆಲ್‌ ಅವಿವ್‌ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.

 

ಇದೀಗ ಇಸ್ರೇಲ್‌ ನಿನ್ನೆ ( ಜೂನ್‌ 16 ) ಇರಾನ್‌ ಸರ್ಕಾರದ ಒಡೆತನದ ಸ್ಟೇಟ್‌ ಸುದ್ದಿ ವಾಹಿನಿಯ ಮುಖ್ಯ ಕಚೇರಿ ಮೇಲೆ ದಾಳಿ ಮಾಡಿದೆ. ಹೌದು, ಸುದ್ದಿ ನಿರೂಪಕಿ ಸುದ್ದಿ ಓದುತ್ತಿದ್ದ ವೇಳೆ ದಿಢೀರನೆ ಕಚೇರಿ ಮೇಲೆ ದಾಳಿ ನಡೆದಿದ್ದು, ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಪೋಟ ಸಂಭವಿಸುತ್ತಿದ್ದಂತೆ ನಿರೂಪಕಿ ಭಯದಿಂದ ಕುರ್ಚಿ ಬಿಟ್ಟು ಎದ್ದು ಓಡಿದ್ದು, ನ್ಯೂಸ್‌ ರೂಮ್‌ ಧೂಳು ಹಾಗೂ ಹೊಗೆಯಿಂದ ಆವೃತಗೊಂಡಿದೆ.

 

ಇರಾನ್‌ನಲ್ಲಿ ವಿದೇಶಿ ಸುದ್ದಿ ವಾಹಿನಿಗಳು ನಿಷಿದ್ಧವಾಗಿರುವ ಕಾರಣ ಸ್ಟೇಟ್‌ ಟಿವಿ ಅತಿಹೆಚ್ಚು ಜನಪ್ರಿಯತೆ ಗಳಿಸಿದೆ. ಇದೀಗ ಇದೇ ಕಚೇರಿಯ ಮೇಲೆ ದಾಳಿಯಾಗಿರುವುದು ಕೋಟ್ಯಂತರ ವೀಕ್ಷಕರಲ್ಲಿ ಭಯ ಹುಟ್ಟಿಸಿದೆ.

Comments are closed.