Home News Bike Taxi: ರಾಜ್ಯದಲ್ಲಿ ಒಂದೇ ದಿನ 103 ಬೈಕ್ ಟ್ಯಾಕ್ಸಿ ಸೀಜ್

Bike Taxi: ರಾಜ್ಯದಲ್ಲಿ ಒಂದೇ ದಿನ 103 ಬೈಕ್ ಟ್ಯಾಕ್ಸಿ ಸೀಜ್

Hindu neighbor gifts plot of land

Hindu neighbour gifts land to Muslim journalist

Bike Taxi: ಈಗಾಗಲೆ ಹೈ ಕೋರ್ಟ್ ಆದೇಶದ ಪ್ರಕಾರ ಬೈಕ್ ಟ್ಯಾಕ್ಸಿ ಗಳನ್ನೂ ಕರ್ನಾಟಕದಲ್ಲಿ ನಿಷೇಧ ಮಾಡಿದ್ದು, ಆದಾಗ್ಯೂ ನಿನ್ನೆ ರೋಡಿಗಿಳಿದ ಹಲವು ಬೈಕ್ ಟ್ಯಾಕ್ಸಿ ಗಾಳನ್ನು ಸೀಜ್ ಮಾಡಲಾಗಿದೆ.

 

ಇನ್ನು ಬೆಂಗಳೂರಿನಲ್ಲಿ ಮೊದಲ ದಿನವೇ 103 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿದೆ. ಈ ಕುರಿತಾಗಿ RTO ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದು, ಇವತ್ತು ಒಂದೇ ದಿನ 103 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಿದ್ದೇವೆ. ಹೈಕೋರ್ಟ್ ಈಗಾಗಲೇ ಬೈಕ್ ಟ್ಯಾಕ್ಸಿ ಅನಧಿಕೃತ ಎಂದು ಆದೇಶಿಸಿದೆ. ಕಾನೂನಿನಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಅವಕಾಶವಿಲ್ಲ ಎಂದಿದೆ. ರಾಜ್ಯದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದೇವೆ. ವೈಟ್ ಬೋರ್ಡ್ ವಾಹನಗಳನ್ನ ಕಮರ್ಷಿಯಲ್ ಬಳಕೆಗೆ ಅವಕಾಶವಿಲ್ಲ. ಬೈಕ್ ಮಾತ್ರವಲ್ಲ ವೈಟ್ ಬೋರ್ಡ್ ಕಾರುಗಳಿಗೆ ಸಹ ಅವಕಾಶ ಇಲ್ಲ. ವೈಟ್ ಬೋರ್ಡ್ ಕಾರುಗಳು ಕಮರ್ಷಿಯಲ್ ಬಳಕೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.