Viral Video : ಹಾವಿಗೆ ಮುತ್ತಿಟ್ಟು ಐಸಿಯು ಸೇರಿದ ವ್ಯಕ್ತಿ – ವಿಡಿಯೋ ವೈರಲ್

Share the Article

Viral Video : ಇರಲಾರದೆ ಇರುವೆ ಬಿಟ್ಟುಕೊಂಡೇನೋ ಎಂಬ ಕನ್ನಡದ ಮಾತಿನಂತೆ ಕೆಲವು ವ್ಯಕ್ತಿಗಳು ತಾವು ಮಾಡುವ ಕೆಲಸದಿಂದ ತಮಗೆ ತೊಂದರೆ ಇದೆ ಎಂದು ತಿಳಿದರೂ ಕೂಡ ಅದನ್ನು ಮಾಡಲು ಮುಂದಾಗುತ್ತಾರೆ. ಇದೀಗ ಅಂತದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು ವ್ಯಕತಿಯೊಬ್ಬ ಹಾವಿಗೆ ಮುತ್ತಿಟ್ಟು ಐಸಿಯು ಸೇರಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದಹಾಗೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ವ್ಯಕ್ತಿಯೊಬ್ಬ ತನ್ನ ಗ್ರಾಮದಲ್ಲಿ ಆಗಾಗ್ಗೆ ಹಾವುಗಳೊಂದಿಗೆ ಸಾಹಸ ಪ್ರದರ್ಶನ ನಡೆಸುತ್ತಿದ್ದ. ಈ ಬಾರಿ, ವಿಷದ ಹಾವಿಗೆ ಮುತ್ತಿಟ್ಟು ವಿಡಿಯೋ ಚಿತ್ರೀಕರಿಸಲು ಯತ್ನಿಸಿದಾಗ, ಹಾವು ಅವನನ್ನು ಕಚ್ಚಿದೆ. ಈ ಘಟನೆಯಿಂದ ಆತ ತೀವ್ರವಾಗಿ ಗಾಯಗೊಂಡು, ಐಸಿಯುನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.

ಪತ್ರಕರ್ತೆ ಪ್ರಿಯಾ ಸಿಂಗ್ ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಜನರಲ್ಲಿ ಆತಂಕವನ್ನುಂಟುಮಾಡಿದೆ.

Comments are closed.