Gujarath: ಅಹಮದಾಬಾದ್ ವಿಮಾನ ದುರಂತ – ಸ್ಥಳದಲ್ಲಿ RSS ಹಾಗೂ ಮುಸ್ಲಿಂ ಸಮುದಾಯದವರು ಒಟ್ಟಾಗಿ ಮಾಡುತ್ತಿರೋದೇನು?

Share the Article

Gujarath: ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ. ಇದ್ದೀಗ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಈ ಘಟನಾ ಸ್ಥಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಹಾಗೂ ಮುಸ್ಲಿಂ ಸಮುದಾಯದವರು ಒಟ್ಟಾಗಿ ಎಲ್ಲರೂ ಶ್ಲಾಘಿಸುವಂತಹ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೌದು, ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ತಮ್ಮವರ ಮೃತದೇಹ ಪಡೆಯಲು, ಗಾಯಗೊಂಡವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಬಂದವರಿಗೆ ಆರ್ ಎಸ್‌ಎಸ್ ಕಾರ್ಯಕರ್ತರು ಊಟದ ವ್ಯವಸ್ಥೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ತಮ್ಮವರ ಮೃತದೇಹ ಪಡೆಯಲು ಮತ್ತು ಗಾಯಾಳುಗಳ ಆರೈಕೆ ಮಾಡಲು ಕುಟುಂಬಸ್ಥರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆಲ್ಲಾ ಆರ್ ಎಸ್‌ಎಸ್ ಕಾರ್ಯಕರ್ತರು ಊಟ, ಕುಡಿಯುವ ನೀರು ನೀಡುತ್ತಿದ್ದಾರೆ.

ಇದರೊಂದಿಗೆ ಜೊತೆಗೆ ಕೆಲವು ಮುಸ್ಲಿಂ ಬಾಂಧವರೂ ಈ ಕಾರ್ಯ ಮಾಡುತ್ತಿದ್ದಾರೆ. ಅಲ್ಲಿರುವ ಮಾಧ್ಯಮ ಸಿಬ್ಬಂದಿಗಳು, ಕುಟುಂಬಸ್ಥರು, ಪೊಲೀಸರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಕೋಮು ಸೌಹಾರ್ದತೆಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:Viral Video: ಅಹಮದಾಬಾದ್ ವಿಮಾನ ದುರಂತ – ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ನಡೆದುಕೊಂಡು ಹೊರ ಬಂದ ವ್ಯಕ್ತಿ – ಮತ್ತೊಂದು ವಿಡಿಯೋ ವೈರಲ್‌

Comments are closed.