KRS Dam:ಕೆ.ಆರ್‌.ಎಸ್‌ ಜಲಾಶಯಕ್ಕೆ ಅಕ್ರಮ ಪ್ರವೇಶ – ಮೂವರ ವಿರುದ್ಧ ಪ್ರಕರಣ ದಾಖಲು

Share the Article

KRS Dam: ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯ ಅಣೆಕಟ್ಟೆಯ ನಿಷೇದಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಮೂವರ ವಿರುದ್ಧ ಕೆಆರ್’ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಡವಾಗಿ ವರದಿಯಾಗಿದೆ. ಭಾನುವಾರ ನಗರದಲ್ಲಿ ಎಸ್ಪಿ ಕಚೇರಿ ಈ ಕುರಿತು ಮಾಹಿತಿ ನೀಡಿದ್ದು, ಜಲಾಶಯದ +106 ಏಪ್ರಾನ್ ಗೇಟ್ ಬಳಿ ನುಸುಳಿ ಚಿತ್ರಿಕರಣ ಮಾಡಿದ್ದ ಚಿಕ್ಕಾಡೆ ಗ್ರಾಮದ ಜೀವನ್, ಗಂಗಾಧ‌ರ್ ಮೂರ್ತಾಚಾರಿ ಹಾಗೂ ದರ್ಶನ್ ಎಂಬುವವರ ವಿರುದ್ಧ ಕಾನೀನಿದ ಎಇಇ ಫಾರೂಕ್ ಅಹಮದ್ ದೂರು ನೀಡಿದ್ದಾರೆ.

ಜಲಾಶಯಕ್ಕೆ ಅಕ್ರಮ ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದ ಹಿನ್ನಲೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣ ಕುರಿತಂತೆ ಕೆಆರ್‌ಎಸ್ ನ ಭದ್ರತಾ ಪಡೆಯ ಕಾರ್ಯವೈಖರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Comments are closed.