Belthangady: ಬೆಳ್ತಂಗಡಿ: 2.60 ಲಕ್ಷ ಮೌಲ್ಯದ ಚಿನ್ನಾಭರಣ ಕಳವು!

Belthangady: ಮನೆಯ ಕಪಾಟಿನಲ್ಲಿಟ್ಟಿದ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಘಟನೆ ಜೂ.14 ರಂದು ಬೆಳ್ತಂಗಡಿಯ (Belthangady) ರೆಖ್ಯಾದಲ್ಲಿ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣಿ ಅಲಿಯಾಸ್ ಆನಂದ ಗೌಡ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕಟ್ಟೆ ಎಂಬಲ್ಲಿ ವಾಸವಿದ್ದು ಇಬ್ಬರು ದಿನಾ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿ ಸಂಜೆ ವಾಪಾಸು ಮನೆಗೆ ಬರುತ್ತಿದ್ದರು. ಕುಸುಮ ಬಳಿ ಇದ್ದ ಒಟ್ಟು ರೂ 2,60,000 ರೂಪಾಯಿ ಅಂದಾಜು ಮೌಲ್ಯದ 52 ಗ್ರಾಂ ಚಿನ್ನಾಭರಣವಿತ್ತು. ಈ ಚಿನ್ನಾಭರಣವನ್ನು ಮೇ.23 ರಂದು ಕೊನೆಯದಾಗಿ ನೋಡಿರುತ್ತಾರೆ.
ಕುಸುಮ ಹಾಗೂ ಗಂಡ ಆನಂದ ಗೌಡ ಶಿರಾಡಿ ದೇವಸ್ಥಾನಕ್ಕೆ ಹೋಗುವ ಸಲುವಾಗಿ ಜೂ.14 ರಂದು ಸಂಜೆ 6.30 ಗಂಟೆ ಸುಮಾರಿಗೆ ಕಪಾಟಿ ನಲ್ಲಿಟ್ಟ ಚಿನ್ನಾಭರಣವನ್ನು ತೆಗೆಯಲು ಹೋದಾಗ ಕಪಾಟಿಗೆ ಹಾಕಿದ್ದ ಕೀ ಹಾಕಿದ ಸ್ಥಿತಿಯಲ್ಲಿ ಇತ್ತು. ಅದರೊಳಗೆ ಇಟ್ಟಿದ್ದ ಚಿನ್ನಾಭರಣ ಕಳವು ಮಾಡಿರುತ್ತಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.15 ರಂದು ಕುಸುಮ ದೂರು ನೀಡಿದ್ದಾರೆ.
Comments are closed.