Tiger: ಕರಡಿಗೋಡು ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ…! ಆತಂಕದಲ್ಲಿ ಗ್ರಾಮಸ್ಥರು

Tiger: ಕೊಡಗಿನಲ್ಲಿ ಇತೀಚೆಗೆ ಜಾನುವಾರುಗಳ ಮೇಲೆ ಹುಲಿ ದಾಳಿ ಹೆಚ್ಚಾಗಿ ನಡೆಯುತ್ತಿರುವ ಬೆನ್ನಲ್ಲೇ ಕಳೆದ ರಾತ್ರಿ ಹುಲಿಯೊಂದು ಸಿದ್ದಾಪುರದ ಕರಡಿಗೋಡು ರಸ್ತೆಯಲ್ಲಿ ಗೋಚರಿಸಿದೆ. ಇಲ್ಲಿನ ಎವೊಲ್ವ್ ಬ್ಲಾಕ್ ಎಸ್ಟೇಟ್ ಬಳಿ ಹುಲಿ ಕಾಣಿಸಿಕೊಂಡಿದ್ದು, ಮೊಬೈಲ್ ನಲ್ಲಿ ವಿಡಿಯೋ ಸೆರೆಯಾಗಿದೆ.

ವಾಹನದ ಬೆಳಕಿನಲ್ಲಿ ಪಕ್ಕದ ಕಾಫಿ ತೋಟದ ಕಡೆಗೆ ತೆರಳಿ ಮರೆಯಾದ ಹಿನ್ನಲೆಯಲ್ಲಿ ಈ ಭಾಗದ ಕಾರ್ಮಿಕರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವನ್ಯಜೀವಿಗಳು ನಾಡಿನತ್ತ ಬರುತ್ತಿದ್ದರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಹಜವಾಗಿ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.