Heavy Rain: ಪೊನ್ನಂಪೇಟೆ ಕೃಷ್ಣಾ ನಗರದಲ್ಲಿ ಮನೆಯ ಗೋಡೆ ಕುಸಿತ – ಇಂದು ಬೆಳಗಿನ ಜಾವ ಘಟನೆ

Share the Article

Heavy Rain: ಪೊನ್ನಂಪೇಟೆಯ ಕೃಷ್ಣ ನಗರದಲ್ಲಿ ಇಂದು ಬೆಳಗಿನ ಜಾವ ಮೂರು ಗಂಟೆ ಸಮಯಕ್ಕೆ ಅಲ್ಲಿನ ನಿವಾಸಿ ಎಚ್ ಕೆ ರವಿ ಎಂಬುವರ ಮನೆಯ ಒಂದು ಬದಿಯ ಗೋಡೆ ಕುಸಿದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆಯ ಒಳಗಡೆ ಆ ಭಾಗದಲ್ಲಿ ಯಾರು ಮಲಗದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಗೋಡೆ ಕುಸಿದು ಕಿಟಕಿ ಬಾಗಿಲು ಸೇರಿದಂತೆ ಕೆಲವು ಪೀಠೋಪಕರಣಗಳಿಗೆ ಹಾನಿ ಉಂಟಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆ ಇಂದು (ಜೂನ್ 16) ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ನೀಡಲಾಗಿದೆ (ದ್ವಿತೀಯ ಪಿಯು ಪರೀಕ್ಷೆ 3 ನಿಗದಿಯಂತೆ ನಡೆಯಲಿದೆ) ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ

Comments are closed.