Shabarimala: ಶಬರಿಮಲೆಯಲ್ಲಿ ಭಾರಿ ಮಳೆ ಹಿನ್ನೆಲೆ: ಪಂಪಾ ನದಿ ಸ್ನಾನಕ್ಕೆ ನಿಷೇಧ

Share the Article

Shabarimala: ಶಬರಿಮಲೆ ಹಾಗೂ ಪಂಪ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಕಾರಣದಿಂದ ಭಕ್ತರು ಪಂಪಾ ತ್ರಿವೇಣಿಯಲ್ಲಿ ಸ್ನಾನ ಮಾಡುವುದಕ್ಕೆ ಮತ್ತು ನದಿಯೊಳಗೆ ಇಳಿಯುವುದಕ್ಕೆ ಜಿಲ್ಲಾಧಿಕಾರಿಗಳು ತಾತ್ಕಾಲಿಕ ನಿಷೇಧ ಹೇರಿದ್ದಾರೆ.

ಪಂಪ ತ್ರಿವೇಣಿಯಲ್ಲಿ ವಾಹನ ನಿಲುಗಡೆಗೂ ತಾತ್ಕಾಲಿಕ ನಿರ್ಬಂಧವಿದೆ. ಪಂಪ-ಶಬರಿಮಲ ಮಾರ್ಗದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಭಕ್ತರು ಮಲೆ ಏರುವಾಗ ಎಚ್ಚರಿಕೆ ವಹಿಸಬೇಕೆಂದು ತಿರುವಿತಾಂಕೂರ್ ದೇವಸ್ವಂ ಬೋರ್ಡ್ ತಿಳಿಸಿದೆ.

ಶಬರಿಮಲದಲ್ಲಿ ಜೂನ್ 1 ರಿಂದ ಪ್ರತಿದಿನ ಗಣಪತಿ ಹೋಮ, ಉಷಃಪೂಜೆ, ನೆಯ್ಯಭಿಷೇಕ, ಮಧ್ಯಾಹ್ನ ಪೂಜೆ, ದೀಪಾರಾಧನೆ, ರಾತ್ರಿ ಪೂಜೆಗಳು ನಡೆಯಲಿವೆ. ಇವುಗಳಲ್ಲದೆ ಪ್ರತಿದಿನ ದೀಪಾರಾಧನೆಯ ನಂತರ ಪತಿನೆಟ್ಟು ಮೆಟ್ಟಿಲುಗಳಲ್ಲಿ ಪಡಿಪೂಜೆಯೂ ನಡೆಯಲಿದೆ. ಜೂನ್ ತಿಂಗಳ ಪೂಜೆಗಳು ಮುಗಿದ ನಂತರ ಜೂನ್ 19 ರಂದು ರಾತ್ರಿ 10 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುವುದು. ಭಕ್ತರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ದರ್ಶನ ವ್ಯವಸ್ಥೆ ಕಲ್ಪಿಸಲು ತಿರುವಿತಾಂಕೂರ್ ದೇವಸ್ವಂ ಬೋರ್ಡ್ ಮತ್ತು ಕೇರಳ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿವೆ.

Comments are closed.