Kedarnath Helicopter Crash: ಕೇದಾರ್‌ನಲ್ಲಿ ಹೆಲಿಕಾಪ್ಟರ್‌ ಪತನ: ಪುಟ್ಟ ಮಗು ಸೇರಿ 7 ಜನ ದುರ್ಮರಣ

Share the Article

Kedarnath Helicopter Crash: ಇಂದು ಬೆಳಗ್ಗೆ 5.30 ರ ಸುಮಾರಿಗೆ ಉತ್ತರಾಖಂಡದ ರುದ್ರಪ್ರಯಾಗದ ಗೌರಿಕುಂಡ್‌ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನವಾಗಿದ್ದು, 23 ತಿಂಗಳ ಮಗು ಸೇರಿ ಏಳು ಜನರು ಮೃತ ಹೊಂದಿದ್ದಾರೆ.

ಉತ್ತರಾಖಂಡದ ಮೇಲಿನ ಹಿಮಾಲಯ ಪ್ರದೇಶದಲ್ಲಿರುವ ಪ್ರಮುಖ ಯಾತ್ರಾ ಸ್ಥಳವಾದ ಕೇದಾರನಾಥಕ್ಕೆ ಹೆಲಿಕಾಪ್ಟರ್ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದು ಕಠಿಣ ಭೂಪ್ರದೇಶ ಮತ್ತು ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳಿಗೆ ಹೆಸರುವಾಸಿಯಾಗಿದೆ.

ಗುಪ್ತಕಾಶಿಯಿಂದ ಕೇದಾರನಾಥ ಧಾಮಕ್ಕೆ 7 ಜನರನ್ನು ಹೊತ್ತೊಯ್ಯುತ್ತಿದ್ದ ಆರ್ಯನ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್ ಗೌರಿಕುಂಡ್ ಕಾಡಿನಲ್ಲಿ ಅಪಘಾತಕ್ಕೀಡಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ಪ್ರಕಾರ, ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರು ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನವರು. “ಪರಿಹಾರ ಮತ್ತು ರಕ್ಷಣಾ ಕಾರ್ಯದ ದೃಷ್ಟಿಯಿಂದ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಘಟನೆಯ ಸ್ಥಳಕ್ಕೆ ರವಾನಿಸಲಾಗಿದೆ” ಎಂದು ಪ್ರಾಧಿಕಾರ ತಿಳಿಸಿದೆ.

Comments are closed.