Mangaluru : ಮಂಗಳೂರಲ್ಲಿ ಮತ್ತೆ ಝಳಪಿಸಿದ ತಲ್ವಾರ್- ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನ!

Mangaluru : ಬೂದಿ ಮುಚ್ಚಿದ ಕೆಂಡದಂತಿರುವ ಕರಾವಳಿಯ ಮಂಗಳೂರಿನಲ್ಲಿ ನಿನ್ನೆಯಷ್ಟೇ ‘ಸ್ಪೆಷಲ್ ಆಯಕ್ಷನ್ ಫೋರ್ಸ್’ (Special Action Force)ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದ್ದಾರೆ. ಈ ಮಧ್ಯೆ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ವ್ಯಕ್ತಿ ಮೇಲೆ ತಲ್ವಾರ್ ನಿಂದ ದಾಳಿಗೆ ಯತ್ನಿಸಿದ ಘಟನೆ ನಡೆದಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀನಪಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸಜೀಪಮನ್ನೂರಿನ ಉಮರ್ ಫಾರೂಕ್ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ.
ಉಮರ್ ಫಾರೂಕ್ ಘಟನೆ ನಡೆದ ದಿನ ಮುಂಜಾನೆ ಮನೆಯಿಂದ ಜೀಪ್ನಲ್ಲಿ ದೇರಳಕಟ್ಟೆಗೆ ತೆರಳುತ್ತಿದ್ದರು. ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ದಾಳಿಗೆ ಯತ್ನಿಸಲಾಗಿದೆ. ತಲ್ವಾರ್ ತಗುಲಿ ಫಾರೂಕ್ ವಾಹನದ ಸೈಡ್ ಮಿರರ್ಗೆ ಹಾನಿ ಆಗಿದೆ. ಘಟನೆ ಬಗ್ಗೆ ನಿನ್ನೆ ಪೊಲೀಸರಿಗೆ ದೂರು ಉಮರ್ ಫಾರೂಕ್ ನೀಡಿದ್ದು, ಬಿಎನ್ಎಸ್ 109, 324(4) ಜೊತೆಗೆ 3(5) BNSರಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಭಾರತದ ಆಸಕ್ತಿಕರ ಕಥೆ: ಮೀನುಗಾರನ ಮಗಳಿಗೆ ಕಣ್ಣು ಹಾಕಿದ್ದ ಕುರು ಸಾಮ್ರಾಜ್ಯದ ಅಧಿಪತಿ!
Comments are closed.