Pakistan : ಪಾಕಿಸ್ತಾನದಲ್ಲಿ ‘ಚಿನ್ನದ ಮೊಟ್ಟೆ’ ಇಡುವ ಕೋಳಿಗಳಾದ ‘ಕತ್ತೆ’ಗಳು – ಕತ್ತೆಗಳನ್ನು ಕೊಂಡು ಚೀನಾ ಮಾಡೋದ್ ಏನು ಗೊತ್ತಾ?

Pakistan : ಭಾರವಾದ ವಸ್ತುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗೋ ಕತ್ತೆಯಿಂದ ಮತ್ತೇನೂ ಪ್ರಯೋಜನ ಇಲ್ಲ ಅಂತಾನೇ ಬಹುತೇಕರು ತಿಳಿದಿದ್ದಾರೆ. ಆದ್ರೆ ಈ ಕತ್ತೆ ಮಹತ್ವ ನಮಗಿಂತ ಪಾಕಿಸ್ತಾನಿಗಳಿಗೆ ಹೆಚ್ಚು ಗೊತ್ತು. ಯಾಕೆಂದರೆ ಇದೀಗ ಪಾಕಿಸ್ತಾನದಲ್ಲಿ ಕತ್ತೆಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳಂತಂತಾಗಿವೆ.

ಹೌದು, ಹಿಂದೆ ಪಾಕ್ (Pak) ನಲ್ಲಿ ಒಂದು ಕತ್ತೆಯನ್ನು ಸುಮಾರು 30 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗ್ತಿತ್ತು. ಸರಾಸರಿ ಕತ್ತೆ ಬೆಲೆ 30 ರಿಂದ 50 ಸಾವಿರ ರೂಪಾಯಿ ಇತ್ತು. ಆದ್ರೆ ಈಗ ಅದ್ರ ಬೆಲೆ ಎರಡು ಲಕ್ಷದವರೆಗೆ ತಲುಪಿದೆ. ಪಾಕಿಸ್ತಾನದಲ್ಲಿ ಸುಮಾರು 60 ಲಕ್ಷ ಜನರು ಕತ್ತೆ ವ್ಯಾಪಾರ ತಮ್ಮ ದೈನಂದಿನ ಜೀವನ ನಡೆಸ್ತಿದ್ದಾರೆ. ಕತ್ತೆಯಿಂದ ಬರೀ ಪಾಕಿಸ್ತಾನಿಗಳಿಗೆ ಮಾತ್ರವಲ್ಲ ಪಾಕ್ ಸರ್ಕಾರಕ್ಕೂ ಪ್ರಯೋಜನವಾಗಿದೆ. ಕತ್ತೆಯನ್ನು ಬೇರೆ ದೇಶಗಳಿಗೆ ಮಾರಾಟ ಮಾಡಿ ಹಣ ಗಳಿಸ್ತಿದೆ.
ಅಂದಹಾಗೆ ಕತ್ತೆ ಮಾರಾಟದಿಂದ ಎಷ್ಟು ಹಣವನ್ನು ವಾರ್ಷಿಕವಾಗಿ ಸಂಪಾದನೆ ಮಾಡ್ತಿದ್ದೇವೆ ಎಂಬುದನ್ನು ಪಾಕಿಸ್ತಾನ ಬಿಟ್ಟುಕೊಟ್ಟಿಲ್ಲ. ವಾರ್ಷಿಕ ಆದಾಯ ಸುಮಾರು 100 ಕೋಟಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದ ಕತ್ತೆಗೆ ಇಷ್ಟೊಂದು ಬೇಡಿಕೆ ಬರೋಕೆ ಚೀನಾ ಕಾರಣ.
ಕತ್ತೆಗಳನ್ನು ಏನು ಮಾಡುತ್ತೆ ಚೀನಾ?
ಪಾಕಿಸ್ತಾನದ ಕತ್ತೆಗಳಿಗೆ ಚೀನಾದಲ್ಲಿ ಬಹುಬೇಡಿಕೆ ಇದೆ. ಬಹುತೇಕ ಕತ್ತೆಗಳನ್ನು ಚೀನಾ ಖರೀದಿ ಮಾಡ್ತಿದೆ. ಕತ್ತೆಗಳನ್ನು ಔಷಧಿಗೆ ಬಳಸಿಕೊಳ್ತಿದೆ . ಪಾಕ್ ನಿಂದ ಕತ್ತೆ ಖರೀದಿ ಮಾಡಿ, ಅದ್ರ ಚರ್ಮದಿಂದ ಔಷಧಿ ತಯಾರಿಸುತ್ತದೆ. ಚರ್ಮದಿಂದ ಎಜಿಯಾವೊ ಎಂಬ ವಿಶೇಷ ರೀತಿಯ ಔಷಧವನ್ನು ತಯಾರಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಇದನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಲು, ರಕ್ತಹೀನತೆ ಸಮಸ್ಯೆಗೆ ಪರಿಹಾರವಾಗಿ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಚೀನಾ ಅವುಗಳನ್ನು ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದೆ.
Comments are closed.