Bengaluru Stampede: ಜಾಲತಾಣಗಳ ವಿರುದ್ಧ ಕ್ರಮಕ್ಕೆ ಆಗ್ರಹ : ಬಿಜೆಪಿ, ಜೆಡಿಎಸ್ ವಿರುದ್ಧ ಡಿಜಿಪಿಗೆ ದೂರು ನೀಡಿದ ಕಾಂಗ್ರೆಸ್

Share the Article

Bengaluru Stampede: ಬೆಂಗಳೂರು ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರಿಗೆ ಕೆಪಿಸಿಸಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹ‌ರ್ ನೇತೃತ್ವದ ನಿಯೋಗವು ಮನವಿ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿತು. ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ಪ್ರಕಟಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿವೆ. ಅವರ ಹೇಳಿಕೆ ಹಾಗೂ ಮಾಹಿತಿ ಆಧರಿಸಿ ತನಿಖೆ ನಡೆಸಬೇಕು ಎಂದು ಕೋರಿದರು. ಐಪಿಎಲ್ ಟೂರ್ನಿಯ ಮುಖಂಡರು ದೂರಿದರು.

ಪಂದ್ಯ ಗೆದ್ದ 24 ಗಂಟೆಯೊಳಗೆ ಆರ್‌ಸಿಬಿ ತಂಡವು ಬೆಂಗಳೂರಿಗೆ ಬರುವ ಅಗತ್ಯ ಇರಲಿಲ್ಲ. ಈ ಸಂಬಂಧ ಆರ್‌ಸಿಬಿ ಮ್ಯಾನೇಜ್‌ಮೆಂಟ್. ಡಿಎನ್ಎ ಹಾಗೂ ಕೆಎಸ್‌ಸಿಎ ಕ್ರಮ ತೆಗೆದು ಕೊಳ್ಳಬೇಕಿತ್ತು. ದುರಂತಕ್ಕೂ ಮುನ್ನ ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಮಾಹಿತಿಯನ್ನೂ ತನಿಖೆಗೆ ಪರಿಗಣಿಸಬೇಕು ಎಂದು ಮುಖಂಡರು ಕೋರಿದರು.

Comments are closed.