RCB Stampede: ಬೆಂಗಳೂರು ಕಾಲ್ತುಳಿತದ ಒಂದೇ ಘಟನೆಗೆ 2 ತನಿಖೆ ಏಕೆ?: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

RCB Stampede: ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಎರಡು ತನಿಖೆಗಳನ್ನು ಏಕೆ ನಡೆಸಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಒಂದೇ ಘಟನೆಯ ಬಗ್ಗೆ ರಚನೆ ಮಾಡಲಾಗಿರುವ ಮ್ಯಾಜಿಸ್ಟ್ರಿಯಲ್ ಹಾಗೂ ವಿಚಾರಣಾ ಆಯೋಗಗಳ ವರದಿಯಲ್ಲಿ ಭಿನ್ನತೆ ಕಂಡುಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಈ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂಬರುವ ಮಂಗಳವಾರಕ್ಕೆ ಮುಂದೂಡಿದೆ.

ಈ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾ| ವಿ. ಕಾಮೇಶ್ವರ ರಾವ್ ಮತ್ತು ನ್ಯಾ| ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠ ಈ ಎಚ್ಚರಿಕೆ ನೀಡಿದೆ. . ನ್ಯಾಯಪೀಠ, ನಿವೃತ್ತ ನ್ಯಾ| ಮೈಕಲ್ ಡಿ ಕುನ್ಹಾ ಅವರ ಏಕಸದಸ್ಯ ಆಯೋಗ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರಕಾರ ಸೂಚಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಬಹು ಅಯೋಗಗಳ ಸಮಿತಿ ತನಿಖೆ ನಡೆಸುವುದರಿಂದ ಗೊಂದಲ ಸೃಷ್ಟಿಯಾಗುವುದಿಲ್ಲವೇ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿತು.
ಹಾಗೆಯೇ ಈ ಸಮಿತಿಗಳಿಗೆ ಸರಕಾರ ಹಾಕಿರುವ ನಿಬಂಧನೆ ವಿವರಗಳನ್ನು ಕೋರ್ಟ್ಗೆ ಸಲ್ಲಿಸುವಂತೆ ಸೂಚಿಸಿತು. ಆಗ ರಾಜ್ಯ ಸರಕಾರ ಪರ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, 2 ಆಯೋಗಗಳಿಗೆ ಹಾಕಿರುವ ನಿಬಂಧನೆಗಳು ಬೇರೆ ಬೇರೆಯಾಗಿದೆ ಎಂದು ಸಮರ್ಥಿಸಿಕೊಂಡರು. ಈ ಮಧ್ಯೆ ವಿಚಾರಣ ಆಯೋಗದ ವರದಿಯು ನ್ಯಾಯಾಲಯಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.
Comments are closed.