Home News Harrasment : ಲೈಂಗಿಕ ಕಿರುಕುಳದ ಬಗ್ಗೆ ದೂರು ಕೊಟ್ಟ ಯುವತಿ – ಥಳಿಸಿ ಮಹಡಿಯಿಂದ ಕೆಳಕ್ಕೆ...

Harrasment : ಲೈಂಗಿಕ ಕಿರುಕುಳದ ಬಗ್ಗೆ ದೂರು ಕೊಟ್ಟ ಯುವತಿ – ಥಳಿಸಿ ಮಹಡಿಯಿಂದ ಕೆಳಕ್ಕೆ ಎಸೆದ ಪೊಲೀಸ್ ದಂಪತಿ

Hindu neighbor gifts plot of land

Hindu neighbour gifts land to Muslim journalist

Harrasment : ಪೊಲೀಸ್ ಕಾನ್ಸ್ಟೇಬಲ್ ಒಬ್ಬ ತನಗೆ ನಿರಂತರವಾಗಿ ಲೈಂಗಿಕ ದೌರ್ಜನ ನೀಡುತ್ತಿದ್ದಾನೆ ಎಂದು ಅಪ್ರಾಪ್ತ ಯುವತಿ ಒಬ್ಬಳು ಪೊಲೀಸ್ ಪತ್ನಿಯ ಬಳಿ ದೂರು ನೀಡಿದ್ದಾಳೆ. ಇದರಿಂದಾಗಿ ಕುಪಿತಗೊಂಡ ಪೊಲೀಸ್ ದಂಪತಿಯು ಆ ಯುವತಿಯನ್ನು ಚೆನ್ನಾಗಿ ಕಳಿಸಿ ಮನೆಯ ಮೇಲ್ಚಾವಣಿಯಿಂದ ಕೆಳಕ್ಕೆ ಬಿಸಾಡಿದ ಅಮಾನುಷ ಘಟನೆ ಎಂದು ಲಕ್ನೋದಲ್ಲಿ ಬೆಳಕಿಗೆ ಬಂದಿದೆ.

ಲಕ್ನೋದ ಲಾಲ್‍ಪುರ ಪ್ರದೇಶದಲ್ಲಿ ಕುಟುಂಬದ ಜತೆ ವಾಸವಿದ್ದ ಯುವತಿಯ ಮನೆಯ ಎದುರೇ ಅದೇ ಕಟ್ಟಡದಲ್ಲಿ ಕಾನ್‍ಸ್ಟೇಬಲ್ ದಂಪತಿ ವಾಸವಿದ್ದರು. ಎರಡೂ ಕುಟುಂಬಗಳು ಒಂದೇ ಶೌಚಾಲಯ ಬಳಸಬೇಕಿತ್ತು. ಪೊಲೀಸ್ ಪೇದೆ ತುರ್ತು ಕರೆ 112 ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಈತ ಅವಕಾಶ ಸಿಕ್ಕಿದಾಗಲೆಲ್ಲ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಎರಡು ತಿಂಗಳಿಗೂ ಅಧಿಕ ಕಾಲದಿಂದ ಈ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ.

ಪೊಲೀಸ್ ಪೇದೆ ಹಲವು ಬಾರಿ ನನ್ನ ದಾರಿಯನ್ನು ಅಡ್ಡಗಟ್ಟಿ, ಕೈ ಹಿಡಿದು, ಹೊಲಸು ಮಾತನಾಡುತ್ತಿದ್ದ ಎಂದು ಸಂತ್ರಸ್ತೆ ವಿವರಿಸಿದ್ದಾಳೆ. ಪೊಲೀಸ್ ಕಿರುಕುಳ ಸಹಿಸಲಾಗದೇ ಯುವತಿಯು ಪಕ್ಕದ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆತನ ಪತ್ನಿಯ ಬಳಿ ಸೋಮವಾರ ಈ ವಿಷಯನ್ನು ಹೇಳಿಕೊಂಡಿದ್ದಾಳೆ. ಈ ವಿಷಯಕ್ಕೆ ಪತಿ ಹಾಗೂ ಪತ್ನಿಯ ನಡುವೆ ಜಗಳವಾಗಿದೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಹೊರಬಂದ ಪತ್ನಿ, ಎರಡು ಮಹಡಿಯ ಕಟ್ಟಡದಲ್ಲಿ ವಾಸವಿದ್ದ ಯುವತಿಗೆ ಸಾಕ್ಷಿ ಒದಗಿಸುವಂತೆ ಸೂಚಿಸಿದ್ದಾಳೆ.

ಈ ಸಂದರ್ಭದಲ್ಲಿ ದಂಪತಿ ಸೇರಿಕೊಂಡು ಯುವತಿಯ ಮೇಲೆ ಹಲ್ಲೆ ನಡೆಸಿ ಛಾವಣಿಯಿಂದ ಕೆಳಕ್ಕೆ ಎಸೆದಿದ್ದಾರೆ. ಮಗಳನ್ನು ಎಸೆದದ್ದನ್ನು ನೋಡಿದ ತಂದೆ, ಪೊಲೀಸ್ ದಂಪತಿಯ ಜತೆ ಜಗಳಕ್ಕೆ ಹೋದಾಗ, ಮಹಿಳೆಯ ಸಹೋದರ ಹಲ್ಲೆ ಮಾಡಿದ ಎಂದು ಆಪಾದಿಸಲಾಗಿದೆ.

ಇನ್ನು ಹದಿನಾರು ವರ್ಷ ವಯಸ್ಸಿನ ಯುವತಿಗೆ ಗಾಯಗಳಾಗಿದ್ದು, ಕಾಲು ಮುರಿದಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ, ದಂಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವತಿಯ ತಂದೆಯ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ