Caste Census:ಹಳೇ ಜಾತಿಗಣತಿ ಕೈಬಿಟ್ಟು ಹೊಸ ಜಾತಿಗಣತಿಗೆ ಮುಂದಾದ ರಾಜ್ಯ ಸರ್ಕಾರ – ಬರೋಬ್ಬರಿ 187 ಕೋಟಿ ವೇಸ್ಟ್, ಹೊಸ ಜಾತಿ ಗಣತಿಗೆ ಆಗೋ ಖರ್ಚೆಷ್ಟು?

Share the Article

Caste Census: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಜಾತಿಗಣತಿ ವಿರುದ್ಧ ಹಲವಾರು ಅಪ ಸ್ವರಗಳು ಕೇಳಿಬಂದಿದ್ದವು. ರಾಜ್ಯಾದ್ಯಂತ ಪ್ರಬಲ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಜಾತಿಗಣತಿ ವರದಿಯನ್ನು ಹೈಕಮಾಂಡ್ ತಿರಸ್ಕರಿಸಿದೆ. ಹೀಗಾಗಿ ಸರ್ಕಾರ ಹಳೆ ಜಾತಿಗಣತಿಯನ್ನು ಕೈ ಬಿಟ್ಟು ಹೊಸ ಜಾತಿಗಣತಿ ಸಮೀಕ್ಷೆಗೆ ಮುಂದಾಗಿದೆ.

ಹೌದು, 150 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ್ದ ವರದಿಯಲ್ಲಿನ ದೋಷಗಳು ಮತ್ತು ಅವಾಸ್ತವಿಕ ಅಂಶಗಳ ಕಾರಣದಿಂದಾಗಿ ಹೊಸ ಸಮೀಕ್ಷೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರು ಮರು ಗಣತಿ ನಡೆಸಲು ನಿರ್ಧರಿಸಿದ್ದಾರೆ.

ಅಚ್ಚರಿ ವಿಚಾರ ಎಂದರೆ ಹಳೇ ಜಾತಿಗಣತಿ ತಯಾರಿಕೆಗೆ ಬರೋಬ್ಬರಿ 187 ಕೋಟಿ ರೂಪಾಯಿ ಖರ್ಚಾಗಿತ್ತು. ಈಗ ಸರ್ಕಾರ ಹಳೆ ಜಾತಿಗಣತಿ ವರದಿಯನ್ನು ಕೈಬಿಡುವ ಮೂಲಕ 187 ಕೋಟಿ ರೂಪಾಯಿ ವ್ಯರ್ಥವಾದಂತಾಗಿದೆ. ಜನರ ಹಣಕ್ಕೆ ಯಾವುದೇ ಬೆಲೆ ಇಲ್ಲದಂತೆ ಸರ್ಕಾರ ನಡೆದುಕೊಳ್ಳುತ್ತಿದೆ.

ಇನ್ನು ಕಳೆದ ಬಾರಿ ಜಾತಿ ಸಮೀಕ್ಷೆ 180 ಕೋಟಿ ಖರ್ಚಾಗಿತ್ತು. ಈ ಬಾರಿ ಮತ್ತೆ ಜಾತಿ ಸಮೀಕ್ಷೆ ಮಾಡಲು 300 ಕೋಟಿ ರೂ.ಗಳಷ್ಟು ಖರ್ಚು ನಿರೀಕ್ಷಿಸಲಾಗಿದೆ. ಇದರಿಂದ ಜನರ ತೆರಿಗೆ ದುಡ್ಡು ದಂಡ ಎಂದು ಜನರು ಕಿಡಿ ಕಾರುತ್ತಿದ್ದಾರೆ.

ಈ ಬಗ್ಗೆ ಇಂದು ಸಚಿವ ಸತೀಶ್ ಜಾರಕಿಹೊಳಿಯವರನ್ನು ಪ್ರಶ್ನಿಸಿದಾಗ ‘ಏನೂ ಮಾಡಕ್ಕಾಗಲ್ಲ. ಸ್ವಲ್ಪ ಖರ್ಚಾಗ್ತದೆ. ಆದರೆ ಕಳೆದ ಜಾತಿ ಗಣತಿ ವರದಿ ಹಲವು ಸಮುದಾಯಗಳಿಂದ ವಿರೋಧವಿತ್ತು. ನಮ್ಮ ಜನಸಂಖ್ಯೆ ಜಾಸ್ತಿಯಿದೆ ಎಂದಿದ್ದರು. ಹೀಗಾಗಿ ಈಗ ಮತ್ತೆ ಸ್ವಲ್ಪ ಖರ್ಚಾಗಬಹುದು. ಏನೂ ಮಾಡಕ್ಕಾಗಲ್ಲ. ಹೊಸದಾಗಿ ಜಾತಿ ಗಣತಿ ಮಾಡಬೇಕಾಗುತ್ತದೆ’ ಎಂದಿದ್ದಾರೆ.

Comments are closed.