USA: ಟ್ರಂಪ್ ವಲಸೆ ನೀತಿ -ಅಮೇರಿಕಾ ತೊರೆದ ವಿಶ್ವದ ಅತ್ಯಂತ ಜನಪ್ರಿಯ ಟಿಕ್ ಟಾಕರ್ ‘ಖಾಬಿ ಲ್ಯಾಮ್’ !!

USA: ಟಿಕ್‌ಟಾಕ್‌ನಲ್ಲಿ ವಿಶ್ವದ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಖಾಬಿ ಲೇಮ್ ವೀಸಾ ಅವಧಿ ಮೀರಿ ಅಮೆರಿಕದಲ್ಲಿ ಉಳಿದುಕೊಂಡಿದ್ದಕ್ಕೆ ವಲಸೆ ಅಧಿಕಾರಿಗಳು ವಶಕ್ಕೆ ಪಡೆದ ಬಳಿಕ ಅಮೆರಿಕವನ್ನು ತೊರೆದಿದ್ದಾರೆ.

ಹೌದು, 160 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇಟಾಲಿಯನ್-ಸೆನೆಗಲ್ ವ್ಯಕ್ತಿ ಲಾಮೆ ಅವರನ್ನು ಹ್ಯಾರಿ ರೀಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಐಸಿಇ ಎಂದು ಕರೆಯಲ್ಪಡುವ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ವೀಸಾ ಅವಧಿ ಮುಗಿದ ನಂತರವೂ ಉಳಿದುಕೊಂಡಿದ್ದಕ್ಕಾಗಿ ಬಂಧಿಸಿದ್ದು, ಆ ಬಳಿಕ “ಸ್ವಯಂಪ್ರೇರಿತ ನಿರ್ಗಮನ”ಕ್ಕೆ ಅವಕಾಶ ನೀಡಿದ ನಂತರ ಅದೇ ದಿನ ಬಿಡುಗಡೆ ಮಾಡಲಾಗಿದೆ.
ಅಂದಹಾಗೆ ಆಫ್ರಿಕಾದ ಸೆನೆಗಲ್‌ನಲ್ಲಿ ಜನಿಸಿದ ಖಾಬಿ, ಚಿಕ್ಕವರಿದ್ದಾಗ ತಮ್ಮ ಪೋಷಕರೊಂದಿಗೆ ಇಟಲಿಗೆ ವಲಸೆ ಬಂದಿದ್ದರು. ಇಟಲಿ ಪೌರತ್ವ ಹೊಂದಿರುವ ಖಾಬಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಆಂಗಿಕ ಅಭಿನಯದ ಮೂಲಕ ಜನಪ್ರಿಯತೆ ಪಡೆದಿದ್ದರು. ಲೇಮ್ 2023ರಿಂದ ʼಇಟಾಲಿಯಾಸ್ ಗಾಟ್ ಟ್ಯಾಲೆಂಟ್ʼ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರಲ್ಲಿ ‘ಹ್ಯೂಗೋ ಬಾಸ್’ ಬ್ರ್ಯಾಂಡ್ ಜೊತೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಮಾಡಿದ್ದ ಖಾಬಿ, ಯುನಿಸೆಫ್‌ನ ಸೌಹಾರ್ದ ರಾಯಭಾರಿಯಾಗಿ ನೇಮಕಗೊಂಡಿದ್ದರು.
ಫೋರ್ಬ್ಸ್ ಪ್ರಕಾರ, ಅವರ ಪೋಸ್ಟ್‌ಗಳು ವೇಗವಾಗಿ ವೈರಲ್ ಆಗಿದ್ದು, ಜೂನ್ 2022 ಮತ್ತು ಸೆಪ್ಟೆಂಬರ್ 2023 ರ ನಡುವಿನ ಅವಧಿಯಲ್ಲಿ ಕಂಪನಿಗಳೊಂದಿಗೆ ಮಾರ್ಕೆಟಿಂಗ್ ಒಪ್ಪಂದಗಳ ಮೂಲಕ ಅಂದಾಜು $16.5 ಮಿಲಿಯನ್ ಗಳಿಸಲು ಅವರಿಗೆ ಸಹಾಯ ಮಾಡಿದೆ.
Comments are closed.