Tumakuru: ಇನ್ಮುಂದೆ ತುಮಕೂರು ಬೆಂಗಳೂರು ಉತ್ತರವಾಗುತ್ತಾ?

Share the Article

Tumakuru: ಕಲ್ಪತರು ನಾಡು ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾರ್ಪಾಡಿಸಲು ಸಕಲ ಸಿದ್ಧತೆಗಳು ನಡೆದಿವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಈ ಕುರಿತಾಗಿ ಸರ್ಕಾರಿ ಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ಖಚಿತಪಡಿಸಿದರು.

ಬೆಂಗಳೂರು ಶರವೇಗವಾಗಿ ಬೆಳೆಯುತ್ತಿದ್ದು ಅಕ್ಕಪಕ್ಕದ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ತುಮಕೂರುಗಳು ಮುಂದೆ ಬೆಂಗಳೂರಿಗೆ ವಿಸ್ತರಿಸಬಹುದು. ತುಮಕೂರು ಎನ್ನುವುದಕ್ಕೂ ಬೆಂಗಳೂರು ಉತ್ತರ ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ. ನಿಯರ್ ಕೆ ಹೋಗಿ ಬೆಂಗಳೂರು ಉತ್ತರ ಎಂದರೆ ಬಹಳ ಸುಲಭವಾಗಿ ಅರ್ಥವಾಗುತ್ತದೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.

ತುಮಕೂರು ಎಂದರೆ ಎಲ್ಲೋ ಇರುವಂತೆ ಭಾಸವಾಗುತ್ತದೆ ಆದರೆ ಈಗಾಗಲೇ ನೆಲಮಂಗಲ ಬಹಳಷ್ಟು ಬೆಳೆದಿರುವುದರಿಂದ ನೆಲಮಂಗಲದಿಂದ ಕೇವಲ 30 ಕಿಲೋಮೀಟರ್ ಹೋದರೆ ತುಮಕೂರನ್ನು ತಲುಪಬಹುದು. ಹಾಗೂ ಈಗಾಗಲೇ 14 ಗ್ರಾಮ ಪಂಚಾಯಿತಿಗಳನ್ನು ಮಹಾನಗರ ಪಾಲಿಕೆಗೆ ಸೇರಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

Comments are closed.