Kerala: ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ: ಇನ್ನೂ ಆರದ ಬೆಂಕಿಯ ಜ್ವಾಲೆ

Share the Article

Kerala: ಕೇರಳದ ಕರಾವಳಿಯಲ್ಲಿ ಸಿಂಗಾಪುರದ ಹಡಗಿನಲ್ಲಿ ನಡೆದ ಬೆಂಕಿ ಅಪಘಾತಕ್ಕೆ ಸಂಬಂಧಪಟ್ಟಂತೆ ಘಟನೆ ನಡೆದು 48 ಗಂಟೆ ಕಳೆದರೂ ಹಡಗಿನಲ್ಲಿ ಬೆಂಕಿಯ ಜ್ವಾಲೆ ಕಡಿಮೆಯಾಗಿಲ್ಲ. ಕ್ಷಣ ಕ್ಷಣಕ್ಕೂ ಇದರಿಂದ ಆತಂಕ ಹೆಚ್ಚಾಗಿದೆ.

 

ಹಡಗಿನಲ್ಲಿ ಬೆಂಕಿಯಿಂದ ಕ್ಷಣಕ್ಷಣಕ್ಕೂ ಸ್ಫೋಟಗೊಳ್ಳುತ್ತಿದೆ. ಸಿಂಗಾಪುರದ ಎಂ.ವಿ.ವಾನ್‌ಹೇ 503 ಕೇರಳ ಮಂಗಳೂರು ಕಡಲತೀರದಲ್ಲಿ ಆತಂಕ ಹೆಚ್ಚಿದೆ. ಪೆಟ್ರೋಲ್‌, ಡೀಸೆಲ್‌, ನೈಟ್ರೋಸೆಲ್ಯೂಲೋಸ್‌ ನಂತರ ಕಂಟೇನರ್‌ಗಳು ಹಡಗಿನಲ್ಲಿ ಇದೆ. ಇವುಗಳಿಂದಲೇ ಕಾರಣ ಹೆಚ್ಚಿದೆ.

 

ಹಡಗಿನಲ್ಲಿ 600 ಕ್ಕೂ ಅಧಿಕ ಕಂಟೇನರ್‌ಗಳಿದ್ದು, ಅದರಲ್ಲಿ 157 ಕಂಟೇನರ್‌ಗಳಲ್ಲಿ ಅಪಾಯಕಾರಿ ಐಟಂಗಳು ಇದೆ. ಈಗಾಗಲೇ ಹಡಗಿನಲ್ಲಿದ್ದ 18 ಮಂದಿಯನ್ನು ಭಾರತೀಯ ನೌಕಾದಳ ರಕ್ಷಣೆ ಮಾಡಿ, ಮಂಗಳೂರಿಗೆ ಕರೆ ತಂದಿದೆ. ಉಳಿದಂತೆ ಕಣ್ಮರೆಯಾಗಿರುವ ನಾಲ್ವರಿಗಾಗಿ ಹುಡುಕಾಟ ಮುಂದುವರಿದೆ.

 

240 ಟನ್‌ ಡೀಸೆಲ್‌, 2000 ಟನ್‌ ಇಂಧನ ತೈಲ, ಇತರೆ ತೈಲ ಸಾಮಾಗ್ರಿಗಳು, ಪ್ಲಾಸ್ಟಿಕ್‌ ಇವೆಲ್ಲವೂ ಹಡಗಿನಲ್ಲಿದ್ದು, ಇವು ಬೆಂಕಿ ಈ ಮಟ್ಟಿಗೆ ಹರಡೋದಕ್ಕೆ ಕಾರಣವಾಗಿದೆ. ನೌಕಾದಳ ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಲೇ ಇದೆ. ಹಡಗು ತುಂಡಾಗಿ ಸಮುದ್ರ ಸೇರುವ ಸಾಧ್ಯತೆ ಇದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎನ್ನುವುದು ಇನ್ನೂ ಕೂಡಾ ಗೊತ್ತಾಗಿಲ್ಲ.

Comments are closed.