Karkala: ಶೇಕ್‌ ಹ್ಯಾಂಡ್‌ ಕೊಡುವ ಕೋಣ ಎಂದೇ ಪ್ರಸಿದ್ಧಿ ಪಡೆದ ಕೋಣ ಚೀಂಕ್ರ ನಿಧನ

Share the Article

Karkala: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್‌ ದಿನಕರ್‌ ಶೆಟ್ಟಿ ಅವರು ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಮಂಗಳವಾರ ನಿಧನ ಹೊಂದಿದ್ದಾರೆ.

ಕೌಶಿಕ್‌ ದಿನಕರ್‌ ಶೆಟ್ಟಿ ಅವರೊಂದಿಗೆ ʼಶೇಕ್‌ ಹ್ಯಾಂಡ್‌ʼ ನೀಡುವ ವಿಡಿಯೋ ವೈರಲ್‌ ಆಗಿತ್ತು. ಕಂಬಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಚೀಂಕ್ರ ತನ್ನ ಛಾಪು ಮೂಡಿಸಿತ್ತು. ಕಾರ್ಕಳದ ಮಖೇಶ ಕೋಣದ ಜೊತೆಗೆ ಜೂನಿಯರ್‌ ಹಗ್ಗ ವಿಭಾಗದಲ್ಲಿ ತನ್ನ ಮೊದಲ ಪದಕ ಗೆದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಪುಗೇರಿಸಿಕೊಂಡಿತ್ತು. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.

Comments are closed.