Sikkim: ಹನಿಮೂನ್‌ಗೆ ಹೋಗಿದ್ದ ದಂಪತಿ ಸೇರಿ 9 ಮಂದಿ ಇದ್ದ ವಾಹನ ನದಿಗೆ ಉರುಳಿ ಎಲ್ಲರೂ ನಾಪತ್ತೆ

Share the Article

Sikkim: ಸಿಕ್ಕಿಂನ ತೀಸ್ತಾ ನದಿಗೆ ವಾಹನವೊಂದು ಬಿದ್ದು, ಪರಿಣಾಮ ನವವಿವಾಹಿತ ದಂಪತಿ ಸೇರಿ 9 ಮಂದಿ ನದಿಗೆ ಬಿದ್ದಿದ್ದು, ಎಲ್ಲರೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ನವವಿವಾಹಿತ ದಂಪತಿ ಹನಿಮೂನ್‌ಗೆಂದು ಸಿಕ್ಕಿಂಗೆ ಹೋಗಿದ್ದು, ಭಾರೀ ಮಳೆಯಾಗುತ್ತಿದ್ದ ಕಾರಣ ವಾಹನ ನಿಯಂತ್ರಣ ತಪ್ಪಿ ತೀಸ್ತಾ ನದಿಗೆ ಉರುಳಿದೆ. ಇಬ್ಬರನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಈ ಘಟನೆ ಮೇ 29 ರಂದು ಲಾಚೆನ್‌ನಿಂದ ಲಾಚುಂಗ್‌ಗೆ ಹಿಂತಿರುಗುವಾಗ ನಡೆದಿದೆ. ದಂಪತಿ ಸೇರಿ ಅವರ ಚಾಲಕ ಸೇರಿ ಒಂಭತ್ತು ಜನ ಇನ್ನೂ ಪತ್ತೆಯಾಗಿಲ್ಲ. ಬಿಜೆಪಿ ನಾಯಕ ಉಮ್ಮದ್‌ ಸಿಂಗ್‌ ಅವರ ಸೋದರಳಿಯ ಕೌಶಲೇಂದ್ರ ಪ್ರತಾಪ್‌ ಸಿಂಗ್‌ (29) ಅವರನ್ನು ಧಂಗಡ್‌ ಸರಾಯ್‌ ಚಿವ್ಲಾಹಾ ಗ್ರಾಮದ ವಿಜಯ್‌ ಸಿಂಗ್‌ ಡಬ್ಬು ಅವರ ಪುತ್ರಿ ಅಂಕಿತಾ ಸಿಂಗ್‌ (26) ಅವರಿಗೆ ವಿವಾಹ ಮಾಡಲಾಗಿತ್ತು.

ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ತಂಡಗಳ ಪ್ರಯತ್ನದ ಹೊರತಾಗಿಯೂ ಇಲ್ಲಿಯವರೆಗೆ ಮೃತದೇಹಗಳು ಅಥವಾ ಬದುಕುಳಿದವರು ಇನ್ನೂ ಪತ್ತೆಯಾಗಿಲ್ಲ ಎಂದು ದಿನೇಶ್‌ ಸಿಂಗ್‌ ಹೇಳಿದ್ದಾರೆ.

Comments are closed.