Nikhil Kamat: ಮುಂದಿನ 5-10 ವರ್ಷಗಳಲ್ಲಿ ದುಬಾರಿಯಾಗುತ್ತೆ ಈ ವಸ್ತು – ಚಿನ್ನ, ಬೆಳ್ಳಿ, ಭೂಮಿ ಅಲ್ಲ : ಮತ್ತೇನು?

Nikhil Kamat: ಮುಂದಿನ 5 ರಿಂದ 10 ವರ್ಷದಲ್ಲಿ ಅತೀ ದುಬಾರಿಯಾಗಲಿರುವ ವಸ್ತುವೊಂದರ ಬಗ್ಗೆ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಝೆರೋಧ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹೌದು, ಮುಂದಿನ ಐದಾರು ವರ್ಷಗಳಲ್ಲಿ ಚಿನ್ನ, ಬೆಳ್ಳಿ, ಹಣ, ಭೂಮಿ, ನಿವೇಶನ, ಮನೆ ಅಲ್ಲ. ಎಲೆಕ್ಟ್ರಾನ್ಸ್ ಹಾಗೂ ಎನರ್ಜಿ ಅತಿ ದುಬಾರಿ ವಸ್ತುವಾಗಿ ಗುರುತಿಸಿಕೊಳ್ಳಲಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಅರೇ ಇದೇನಿದು? ಇಂಧನ ಎಲ್ಲಕ್ಕಿಂತ ದುಬಾರಿಯಾಗುತ್ತಾ? ಅನ್ನೋ ಪ್ರಶ್ನೆಗೆ ನಿಖಿಲ್ ಕಾಮತ್ ವಿವರಣೆ ನೀಡಿದ್ದಾರೆ.
ನಿಖಿಲ್ ಕಾಮತ್ ವಿದ್ಯುತ್, ಇಂಧನ ಶಕ್ತಿ ವಿಶ್ವದಲ್ಲಿ ಯಾವ ರೀತಿ ಬಳಕೆಯಾಗುತ್ತಿದೆ. ಮುಂದಿನ 5 ರಿಂದ 10 ವರ್ಷದಲ್ಲಿ ಇದರ ಬಳಕೆ ಹೇಗೆ ಹೆಚ್ಚಾಗಲಿದೆ ಎಂದು ವಿವರಿಸಿದ್ದಾರೆ. ಸದ್ಯ ಆರ್ಟಿಫೀಶಿಯಲ್ ಇಂಟಲಿಜೆನ್ಸ್, ನೆಟ್‌ಫ್ಲಿಕ್ಸ್ , ವಿದ್ಯುತ್ ಚಾಲಿತ ವಾಹನ ಸೇರಿದಂತೆ ನೇರವಾಗಿ ವಿದ್ಯುತ್ ಬಳಕೆ ಮಾಡುವವರ ಪ್ರಮಾಣ ಹೆಚ್ಚು. ಪ್ರತಿಯೊಬ್ಬರು ಮೊಬೈಲ್ ಬಳಕೆ ಮಾಡುತ್ತಾರೆ. ಹೆಡ್‌ಫೋನ್ ಸೇರಿದಂತೆ ಹಲವು ಗ್ಯಾಜೆಟ್ಸ್ ಬಳಕೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಡೇಟಾ ಸರ್ವರ್ ಬಳಕೆಯೂ ಹೆಚ್ಚು. ಇವೆಲ್ಲದ್ದಕ್ಕೂ ವಿದ್ಯುತ್ ಶಕ್ತಿ ಅತ್ಯಂತ ಪ್ರಮುಖ.
ಅಲ್ಲದೆ ಡೇಟಾ ಸೆಂಟರ್ ಪ್ರಮಾಣಗಳು ಹೆಚ್ಚಾಗುತ್ತಿದೆ. ಸರ್ವರ್ ಮೂಲಕ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ ಹೆಚ್ಚು. ಕ್ಲೌಡ್ ಸ್ಟೋರೇಜ್‌ನಿಂದ ಹಿಡಿದು ಎಲ್ಲಾ ಆನ್‌ಲೈನ್ ಚಟುವಟಿಕೆಗಳ ಸ್ಟೋರೇಜ್ ಸೆಂಟರ್ ಸರ್ವರ್‌ಗೆ ಹೆಚ್ಚಿನ ವಿದ್ಯುತ್ ಶಕ್ತಿ ಬೇಕು. ಇನ್ನು ಎಲೆಕ್ಟ್ರಿಕ್ ವಾಹನ ಬಳಕೆ ಪ್ರತಿ ವರ್ಷ 4 ಲಕ್ಷಕ್ಕೂ ಅಧಿಕವಾಗಿದೆ. ಇದಕ್ಕೆಲ್ಲಾ ಮುಖ್ಯ ಶಕ್ತಿ ವಿದ್ಯುತ್.
ಇಷ್ಟು ಮಾತ್ರವಲ್ಲದೆ ಪ್ರತಿಯೊಬ್ಬರ ಬಳಿಕ ಕನಿಷ್ಠ ಒಂದು ಸ್ಮಾರ್ಟ್‌ಫೋನ್ ಇದೆ. ಇದರ ಜೊತೆಗೆ ಇತರ ಗ್ಯಾಜೆಟ್ಸ್ ಬಳಕೆ ಮಾಡುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬನ ಪ್ರತಿ ದಿನದ ವಿದ್ಯುತ್ ಬಳಕೆ ಹೆಚ್ಚಾಗಲಿದೆ. ಕಾರಣ ತಂತ್ರಜ್ಞಾನ ಆವಿಷ್ಕಾರಗೊಂಡಂತೆ ಬಳಕೆಯೂ ಹೆಚ್ಚಾಗಲಿದೆ. ಹೊಸ ಜನರೇಶನ್ ಸಂಪೂರ್ಣ ಗ್ಯಾಜೆಟ್ಸ್ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಒಂದು ನಿಮಿಷವೂ ವಿದ್ಯುತ್ ಬಳಕೆ ಇಲ್ಲದೆ ಇರಲು ಸಾಧ್ಯವಿಲ್ಲ. ವಿಶ್ವದ ಎಲ್ಲಾ ದೇಶಗಳ ಪರಿಸ್ಥಿತಿ ಇದೇ ಆಗಿರುತ್ತದೆ. ಹೀಗಾಗಿ ವಿದ್ಯುತ್ ಅತಿ ದುಬಾರಿ ವಸ್ತುವಾಗಿ ಮುಂದೆ ಗುರುತಿಸಿಕೊಳ್ಳಲಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
Comments are closed.