RCB: ಡಿಕೆಶಿ ಯಿಂದ RCB ತಂಡ ಖರೀದಿ? ಖರೀದಿಸಿದರೆ ಇಡಬಹುದು ಈ ಹೆಸರು

RCB: ತಯಾರಿಕಾ ದೈತ್ಯ ಡಿಯಾಜಿಯೋ ಪಿಎಲ್ಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಪಾಲನ್ನು ಮಾರಾಟ ಮಾಡಲು ಚಿಂತಿಸುತ್ತಿದೆ ಎಂಬ ವಿಚಾರ ಸದ್ಯ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡವನ್ನು ಖರೀದಿ ಮಾಡುತ್ತಾರೆ ಎಂಬ ಒದಂತಿ ಕೂಡ ಹಬ್ಬುತ್ತಿದೆ. ಇದರೊಂದಿಗೆ ಒಂದು ವೇಳೆ ಡಿಕೆಶಿ ತಂಡವನ್ನು ಖರೀದಿಸಿದರೆ ಈ ಹೆಸರನ್ನು ಇಡಬಹುದು ಎಂಬ ಚರ್ಚೆಯು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ.

ಹೌದು, ಡಿಯಾಜಿಯೋ ತನ್ನ ಭಾರತೀಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೂಲಕ ಆರ್ಸಿಬಿಯ ಮಾಲೀಕತ್ವವನ್ನು ಪಡೆದುಕೊಂಡಿದೆ. ಈ ತಂಡದ ಮೌಲ್ಯವನ್ನು ಸುಮಾರು 2 ಬಿಲಿಯನ್ ಡಾಲರ್ಗೆ ಮಾರಲು(ಸುಮಾರು 16,700 ಕೋಟಿ ರೂ.) ನಿರ್ಧರಿಸಲಾಗುವ ಸಾಧ್ಯತೆಯಿದೆ ಎಂದು ಬ್ಲೂಮ್ಬರ್ಗ್ ವರದಿಯೊಂದು ಉಲ್ಲೇಖಿಸಿದೆ. ಇದನ್ನೆಲ್ಲ ಡಿಕೆ ಶಿವಕುಮಾರ್ ಆರ್ಸಿಬಿ ತಂಡವನ್ನು ಖರೀದಿಸುತ್ತಾರೆ ಎಂಬ ವದಂತಿ ಜೋರಾಗಿ ಸದ್ದು ಮಾಡುತ್ತಿದೆ.
ಕಾಲ್ತುಳಿತ ಘಟನೆಗೆ ಡಿಕೆ ಶಿವಕುಮಾರ್ ಅವರನ್ನೇ ದೂಷಿಸಲಾಗುತ್ತಿದ್ದು, ತಮಾಷೆಯ ರೀತಿಯಲ್ಲಿ ಅವರೇ ತಂಡವನ್ನು ಖರೀದಿಸಿದರೆ ಒಳ್ಳೆಯದು ಎಂಬ ಪೋಸ್ಟ್ಗಳು ವೈರಲ್ ಆಗಿವೆ. ಒಂದು ವಿಭಾಗದ ಜನರು ಡಿಕೆ ಶಿವಕುಮಾರ್ ತಂಡವನ್ನು ಖರೀದಿಸಿದರೆ ತಂಡಕ್ಕೆ ಯಾವ ಹೆಸರಿಡಬಹುದೆಂಬ ತಮಾಷೆಯ ಊಹೆಗಳನ್ನು ಹಂಚಿಕೊಂಡಿದ್ದಾರೆ.
ಡಿಕೆಶಿ ಯಾವ ಹೆಸರು ಇಡಬಹುದು? ಟ್ರೋಲರ್ಸ್ ಸೂಚಿಸಿದ ಹೆಸರಿವು:
ಬೆಂಗಳೂರು ಡಿಕೆ ಬ್ರದರ್ಸ್, ಬಂಡೆ ಬೆಂಗಳೂರು ಚಾಲೆಂಜರ್ಸ್, ಸಿಡಿ ಶಿವು ಚಾಲೆಂಜರ್ಸ್ ಕರ್ನಾಟಕ, ಬೆಂಗಳೂರು ಬ್ರದರ್ಸ್ ಯುನೈಟೆಡ್, ಕನಕಪುರ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಸೌತ್ ಬೆಂಗಳೂರು, ಡೆಪ್ಯುಟಿ ಸಿಎಂ ಬೆಂಗಳೂರು, ರಾಮನಗರ ಚಾಂಪಿಯನ್ಸ್, ಕನಕಪುರ ಬಂಡೆ ಬ್ರೇಕರ್ಸ್, ತಿಹಾರ್ ಚಾಲೆಂಜರ್ಸ್ ಇನ್ನೂ ಕೆಲವರು ತಂಡದ ಟ್ಯಾಗ್ಲೈನ್ಗೆ ‘ನೀವ್ ಹೊಡಿತಾ ಇರ್ಬೇಕು, ನಾವ್ ಗೆಲ್ತಾ ಇರ್ಬೇಕು’ ಎಂಬ ತಮಾಷೆಯ ಸಾಲನ್ನು ಸೂಚಿಸಿದ್ದಾರೆ.
Comments are closed.