Home News Rahul Gabdhi ಭೇಟಿ ಹಿನ್ನೆಲೆ – ಗುಡಿಸಲಿನಲ್ಲಿ ಐಷಾರಾಮಿ ಟಾಯ್ಲೆಟ್ ನಿರ್ಮಾಣ, ಭೇಟಿ ಬಳಿಕ ದ್ವಂಸ!!

Rahul Gabdhi ಭೇಟಿ ಹಿನ್ನೆಲೆ – ಗುಡಿಸಲಿನಲ್ಲಿ ಐಷಾರಾಮಿ ಟಾಯ್ಲೆಟ್ ನಿರ್ಮಾಣ, ಭೇಟಿ ಬಳಿಕ ದ್ವಂಸ!!

Hindu neighbor gifts plot of land

Hindu neighbour gifts land to Muslim journalist

Rahul Gabdhi: ಬಿಹಾರ ಎಲೆಕ್ಷನ್ ಮೇಲೆ ಕಣ್ಣಿಟ್ಟಿರುವ ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೆ ಟ್ರೋಲ್ ಆಗಿದ್ದು, ಇದೀಗ ರಾಗಾ ಗಾಗಿ ಐಷಾರಾಮಿ ಶೌಚಾಲಯ ನಿರ್ಮಿಸಿದ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ಭೇಟಿ ಬಳಿಕ ಐಷಾರಾಮಿ ಶೌಚಾಲಯವನ್ನು ದ್ವಂಶ ಕೂಡ ಮಾಡಲಾಗಿದೆ ಎಂಬ ಆರೋಪ ಕೂಡ ಬಂದಿದೆ.

ಹೌದು, ರಾಹುಲ್, ಮೌಂಟೇನ್ ಮ್ಯಾನ್ ಎಂದು ಪ್ರಸಿದ್ಧಿ ಪಡೆದಿರುವ ದಶರಥ ಮಾಂಜಿ ಗುಡಿಸಲಿಗೆ ಭೇಟಿ ಕೊಟ್ಟಿದ್ದು, ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಆದರೆ ಮಾಂಝಿ ಮನೆಯಲ್ಲಿ ಶೌಚಾಲಯ ಇರಲಿಲ್ಲ. ಏಕೆಂದರೆ ಕೆಲವು ವರ್ಷ ಹಿಂದೆ ಹೆದ್ದಾರಿ ಅಗಲೀಕರಣಕ್ಕಾಗಿ ತೆರವು ಮಾಡಲಾಗಿತ್ತು. ಹೀಗಾಗಿ ರಾಹುಲ್‌ ಆಗಮನದ ಹಿನ್ನೆಲೆಯಲ್ಲಿ ವಿಶೇಷ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ರಾಹುಲ್ ಗಾಂಧಿ ಅಲ್ಲಿಂದ ಹೋದ ತಕ್ಷಣ, ಇಡೀ ಸ್ನಾನಗೃಹವನ್ನು ಕೆಡವಲಾಯಿತು. ಈ ಬಗ್ಗೆ ದೂರಿರುವ ದಶರಥ್ ಮಾಂಝಿ ಅವರ ಕುಟುಂಬ, ಸರ್ಕಾರದಿಂದ ಒದಗಿಸಲಾದ ಯಾವುದೇ ಶೌಚಾಲಯ ಹೊಂದಿಲ್ಲ ಎಂದು ಕಿಡಿಕಾರಿದೆ.

ಇಂಟರ್ನೆಟ್ ನಲ್ಲಿ ಈ ಫೋಟೋಗಳು ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿದ್ದು, ಇದೊಂದು ಬೂಟಾಟಿಕೆ ಅಂತ ನೆಟ್ಟಿಗರು ಕಮೆಂಟ್ಸ್ ಮಾಡಿದ್ದಾರೆ. ಜನರ ಬಗ್ಗೆ ಕಾಳಜಿ ಇರೋ ರೀತಿ ರಾಹುಲ್ ಬಿಲ್ಡಪ್ ಕೊಟ್ಟು ಡ್ರಾಮಾ ಮಾಡ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಹೊಸ ಟಾಯ್ಲೆಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.