KMF Milk: ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ನಂಬರ್ ಒನ್ – ರಾಜ್ಯದಲ್ಲಿ ಮತ್ತೆ ಹರಿಯಿತು ಹಾಲಿನ ಹೊಳೆ.!

Share the Article

KMF Milk: ಹಸು ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲಿಗಲ್ಲು ಸಾಧಿಸಿದೆ, ಹಾಲು ಉತ್ಪಾದನೆಯಲ್ಲಿ ಮತ್ತೆ ಕೆಎಂಎಫ್ ನಂಬರ್ ಒನ್ ಆಗಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತೆ ಹಾಲಿನ ಹೊಳೆಯೇ ಹರಿದಿದೆ.

ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ದಾಖಲೆಯನ್ನೇ ಬರೆದಿದೆ. ರಾಜ್ಯದಲ್ಲಿ ಹಾಲು ಉತ್ಪಾದನೆ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಮೇ 22 ರಿಂದ ನಿತ್ಯ ಹಾಲು ಸಂಗ್ರಹ ಒಂದು ಕೋಟಿಕ್ಕಿಂತ ಹೆಚ್ಚು ಸಂಗ್ರಹವಾಗುತ್ತಿದೆ. ಕಳೆದ ವರ್ಷ ಜೂನ್ 28 ರಂದು ಒಂದು ಕೋಟಿ ಹಾಲು ಸಂಗ್ರಹವಾಗಿತ್ತು.

ಒಂದು ವರ್ಷದ ಬಳಿಕ ಹಾಲಿನ ಸಂಗ್ರಹ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಮುಂಗಾರು ಪೂರ್ವದಲ್ಲಿ ರಾಜ್ಯದಲ್ಲೆಡೆ ಉತ್ತಮ ಮಳೆಯಿದಾಗಿ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ. ನಿತ್ಯ ಒಂದು ಕೋಟಿ ಹಾಲು ಸಂಗ್ರಹಿಸುವ ಗುರಿಯನ್ನು ಕೆಎಂಎಫ್ ಹೊಂದಿತ್ತು. ಅದರ ಆಶಯದಂತೆ ಮೇ 22 ರಿಂದ ನಿತ್ಯ 1,06 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ.

Comments are closed.