Mandya : ವಿಚಿತ್ರ ಘಟನೆ- ಕಳ್ಳತನಕ್ಕೆಂದು ಬಂದು ಏನೂ ಕಡಿಯದೆ ದೇವರಿಗೆ ಕೈ ಮುಗಿದು ಹೋದ ಖದೀಮ !!

Share the Article

Mandya: ಕಳ್ಳತನಕ್ಕಾಗಿ ಮುಸುಕು ಧರಿಸಿ ದೇವಾಲಯ ಪ್ರವೇಶಿಸಿದ ಕಳ್ಳ ಹುಂಡಿಗೆ ಕೈಮುಗಿದು ಕೃತ್ಯವೆಸಗದೆ ಬರಿಗೈಲಿ ವಾಪಸ್ ತೆರಳಿದ ಪ್ರಕರಣ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದಲ್ಲಿ ನಡೆದಿದೆ. ಕೈಮುಗಿದು ವಾಪಸ್ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೌದು, ಮುಸುಕುಧಾರಿಯೊಬ್ಬ ಕದಲೂರು ಗ್ರಾಮದ ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ಗುರುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ದೇವಾಲಯದ ಸುತ್ತ ಗಮನಿಸಿದ್ದಾನೆ. ಆದರೆ, ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ತೆರಳಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪ್ರಕರಣ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments are closed.