Bengaluru Stampede: ಆರ್ಸಿಬಿ ತಂಡ ಸ್ವಾಗತಕ್ಕೆ ನೀವು ಯಾಕೆ ಹೋದ್ರಿ? ಡಿಕೆ ಶಿವಕುಮಾರ್ಗೆ ತರಾಟೆ ತೆಗೆದುಕೊಂಡ ಸಿದ್ದರಾಮಯ್ಯ

Share the Article

Bengaluru Stampede: 17 ವರ್ಷಗಳ ಬಳಿಕ ಆರ್‌ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ಆರ್ಸಿಬಿ ತಂಡವನ್ನು ನಗರಕ್ಕೆ ಬರಮಾಡಿಕೊಳ್ಳಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೆಚ್ಎಎಲ್ಗೆ ತೆರಳಿದ್ದರು. ಆದರೆಎ ಅವರು ಅಲ್ಲಿಗೆ ತೆರಳಿ ತಂಡವನ್ನು ಸ್ವಾಗತಿಸಿದ್ದಾಗಿ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಸಿಎಂ, ಡಿಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದು, ನೀವು ಯಾಕೆ ಹೆಚ್‌ಎಎಲ್‌ಗೆ ಹೋಗಿದ್ರಿ. ನೀವು ಹೋಗಿದ್ದಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸರ್ಕಾರವೇ ಕಾರ್ಯಕ್ರಮವನ್ನ ಆಯೋಜಿಸಿತ್ತು ಎಂಬಂತೆ ಬಿಂಬಿಸುತ್ತಿದ್ದಾರೆ. ಅಲ್ಲಿಗೆ ನೀವು ಹೋಗಬೇಕಾದ ಪ್ರೋಟೋಕಾಲ್ ಏನಾದ್ರೂ ಇತ್ತಾ. ನೀವ್ಯಾಕೆ ಅಲ್ಲಿಗೆ ಹೋಗಬೇಕಿತ್ತು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆರ್‌ಸಿಬಿ ಐಪಿಎಲ್ ಕಪ್ ಗೆದ್ದ, ಖುಷಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ಜೂನ್ 4 ರಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಸರ್ಕಾರ ಒಂದು ಖಾಸಗಿ ಕ್ಲಬ್ ಪಂದ್ಯಕ್ಕೆ ಇಷ್ಟೆಲ್ಲಾ ಗಮನ ಕೊಡಬೇಕಿತ್ತಾ? ಇದರ ಹಿಂದೆ ಸರ್ಕಾರದ ಪಬ್ಲಿಸಿಟಿಯ ಗುಟ್ಟು ಅಡಗಿತ್ತಾ? ಇವರ ಅವೈಜ್ಞಾನಿಕ ಕಾರ್ಯಕ್ರಮ ಆಯೋಜನೆಯಿಂದ 11 ಮಂದಿ ಮುಗ್ದರ ಜೀವ ಬಲಿಯಾಯ್ತು.

Comments are closed.