Mangaluru : ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಪ್ರಕರಣ – ಸೆಮಿನಾರ್ ತಪ್ಪಿಸಲು ಮೆಡಿಕಲ್ ವಿದ್ಯಾರ್ಥಿನಿಯಿಂದಲೇ ಹೈಡ್ರಾಮ

Mangaluru : ದೇರಳಕಟ್ಟೆಯ ನಾಟೆಕಲ್ಲಿನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಬಾಂಬ್ ಬೆದರಿಕೆಯ ಕರೆ ಬಂದಿತ್ತು. ಇದರಿಂದ ಕೆಲಕಾಲ ಆತಂಕ ನಿರ್ಮಾಣವಾಗಿದ್ದು ಪೊಲೀಸರು ಈ ಕರೆಯ ಹಿಂದೆ ಬಿದ್ದಿದ್ದರು. ಇದೀಗ ಈ ಪ್ರಕರಣಕ್ಕೆ ಅಡ್ವೆಸ್ಟ್ ಸಿಕ್ಕಿದ್ದು ಇದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಸೆಮಿನಾರ್ ತಪ್ಪಿಸಲು ಬಾಂಬ್ ಇದೆ ಎಂದು ಕರೆ ಮಾಡಿರುವುದು ತಿಳಿದು ಬಂದಿದೆ.

ಹೌದು, ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ಕಾಲ್ ಮಾಡಿ ಬಾಂಬ್ ಸ್ಪೋಟದ ಬೆದರಿಕೆ ಒಡ್ಡಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ.
ಅಂದಹಾಗೆ ಡಾ.ಚಲಸಾನಿ ಮೋನಿಕಾ ಚೌಧರಿ ಜೂ.4 ರಂದು ಸೆಮಿನಾರ್ ಕೊಡಬೇಕಿತ್ತು. ಆದರೆ, ಈ ಸೆಮಿನಾರ್ನಿಂದ ತಪ್ಪಿಸಿಕೊಳ್ಳಲು ಮೋನಿಕಾ ಜೂನ್ 4ರ ಬೆಳಗ್ಗೆ 8.15ಕ್ಕೆ ತಾನು ಓದುತ್ತಿರುವ ಕಣಚೂರು ಮೆಡಿಕಲ್ ಕಾಲೇಜಿನ ಹೆರಿಗೆ ವಾರ್ಡ್ನ ಸ್ಥಿರ ದೂರವಾಣಿಗೆ ಕರೆ ಮಾಡಿ, “ಬೆಳಗ್ಗೆ 11ಕ್ಕೆ ಕಣಚೂರು ಆಸ್ಪತ್ರೆ ಸ್ಫೋಟಿಸುವುದಾಗಿ” ಬೆದರಿಕೆ ಹಾಕಿದ್ದಾರೆ. ನಂತರ, ಮೋನಿಕಾ ಚೌಧರಿಯೇ ನಮ್ಮ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ, ದೂರು ನೀಡಿದ ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿಯೇ ಬಾಂಬ್ ಬೆದರಿಕೆ ಹಾಕಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಡಾ.ಚಲಸಾನಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ. ಮೋನಿಕಾ ಚೌಧರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವ ಹಿಂದಿನ ಕಾರಣ ಗೊತ್ತಾಗಿದೆ.
Comments are closed.