Virat Kohli: ಬೆಂಗಳೂರು ಕಾಲ್ತುಳಿತ ಪ್ರಕರಣ – ಮನನೊಂದು ಐಪಿಎಲ್ ಮತ್ತು RCB ಯಿಂದ ಕೊಹ್ಲಿ ನಿವೃತ್ತಿ!?

Virat Kohli ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಕರ್ನಾಟಕದ ಜನತೆಯನ್ನು ಶೋಕ ಸಾಗರದಲ್ಲಿ. ಆರ್‌ಸಿಬಿ 18 ವರ್ಷಗಳ ಬಳಿಕ ಗೆದ್ದಿತು ಎಂದು ಸಂಭ್ರಮಿಸಬೇಕು ಅಥವಾ ಆರ್‌ಸಿಬಿ ಅಭಿಮಾನಿಗಳ. ದುರಂತ ಸಾವನ್ನು ಕಂಡು ದುಃಖ ಪಡಬೇಕೋ ಎಂದು ಒಂದೂ ತಿಳಿಯದಾಗಿದೆ. ಇದೀಗ ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಅಲ್ಲದೆ ಇದರಿಂದ ಮನನೊಂದ ಕೊಹ್ಲಿ ಅವರು ಐಪಿಎಲ್ ಮತ್ತು ಆರ್ ಸಿ ಬಿ ಯಿಂದ ನಿವೃತ್ತಿ ಪಡೆಯುತ್ತಾರೆ ಎಂಬ ಅನುಮಾನ ಕೂಡ ಮೂಡಿದೆ.

ಹೌದು, 18 ವರ್ಷಗಳ ಬಳಿಕ ಗೆದ್ದ ಖುಷಿ 18 ಗಂಟೆಯೂ ಉಳಿಯಲಿಲ್ಲ.. ಎಲ್ಲವೂ ಸರಿಹೊಯ್ತು ಎನ್ನುವಷ್ಟರಲ್ಲಿ ಯಾರೋ ಮಾಡಿದ ಎಡವಟ್ಟಿಗೆ ಅಮಾಯಕ ಜೀವಗಳು ಬಲಿಯಾಗಿವೆ. ಬದುಕಿ ಬಾಳಬೇಕಿದ್ದ ಯುವಕ-ಯುವತಿಯರು ಮಸಣದ ಹಾದಿ ಹಿಡಿದಿದ್ದು ಅನೇಕರಿಗೆ ಶಾಕ್ ಉಂಟಾಗಿದೆ. ಇದೀಗ ಚಿನ್ನಸ್ವಾಮಿ ಕಾಲ್ತುಳಿತ ದುರಂತಕ್ಕೆ ವಿರಾಟ್‌ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಾವುಕ ಪೋಸ್ಟ್ ಒಂದನ್ನು ಶೇರ್‌ಮಾಡಿರುವ ಕೊಹ್ಲಿ, ʼಈಗ ನನ್ನಿಂದ ಏನೂ ಹೇಳಲು ಸಾಧ್ಯವಿಲ್ಲʼವೆಂದು ಹೇಳಿದ್ದಾರೆ. ಆರ್‌ಸಿಬಿ ಹೇಳಿಕೆಯ ಪೋಸ್ಟ್ ಹಂಚಿಕೊಂಡಿರುವ ಕೊಹ್ಲಿ, ʼAt a loss for words. Absolutely gutted ?ʼ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಅಲ್ಲದೆ ಈ ಘಟನೆಯಿಂದ ನನಗೆ ನಿಜವಾಗಲೂ ತುಂಬಾ ನೋವಾಗಿದೆ. ನಮ್ಮನ್ನು ನೋಡಲು ಬಂದ 11 ಮಂದಿ ಪ್ರಾಣ ಕಳೆದುಕೊಂಡಿರುವುದು ತುಂಬಾ ನೋವುಂಟು ಮಾಡಿದೆ. ಈ ಘಟನೆ ನನ್ನ ಜೀವನದಲ್ಲಿ ಮರೆಯಲಾರದ ನೋವಿನ ಘಟನೆಯಾಗಿದೆ ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಬಹಳ ನೊಂದುಕೊಂಡಿರುವ ವಿರಾಟ್ ಕೊಹ್ಲಿ ಮುಂಬರುವ ದಿನಗಳಲ್ಲಿ ಐಪಿಎಲ್ ಮತ್ತು ಆರ್‌ಸಿಬಿಗೆ ಗುಡ್ ಬೈ ಹೇಳುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ
Comments are closed.