RCB: ಬೆಂಗಳೂರು ಕಾಲ್ತುಳಿತ ಪ್ರಕರಣ ಭೀಕರತೆಗೆ ಸಿಕ್ಕಿದ ಅಷ್ಟು ಚೀಲ ಚಪ್ಪಲಿಗಳೇ ಸಾಕ್ಷಿ!

Share the Article

RCB : RCB ವಿಜಯೋತ್ಸವವು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದಿದ್ದು, ಅಂದು ನಡೆದ ದುರಂತಕ್ಕೆ ದೇಶದೆಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಘಟನೆ ಭೀಕರತೆಗೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಮರಂತಕ್ಕೆ ಸಾಕ್ಷಿಯಾಗಿ ಹರಡಿಕೊಂಡಿದ್ದ ಪಾದರಕ್ಷೆಗಳನ್ನು ತೆರವು ಮಾಡಿದ್ದು, ಸುಮಾರು 150 ಚೀಲದಷ್ಟು ಪಾದರಕ್ಷೆಗಳನ್ನು ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಹಲವು ಪಾದರಕ್ಷೆಗಳ ಮೇಲೆ ಮಾಸಿದ ರಕ್ತದ ಕಲೆಗಳು ಕಂಡು ಬಂದಿದೆ.

ಕ್ರೀಡಾಂಗಣದ ಸ್ವಚ್ಛತಾ ಸಿಬ್ಬಂದಿ ತೆರವು ಮಾಡಿದ್ದು, 150 ಚೀಲದಷ್ಟು ಪಾದರಕ್ಷೆಗಳನ್ನು ಸಂಗ್ರಹಿಸಲಾಗಿದೆ. ಗೇಟ್ ಸಂಖ್ಯೆ 7, 18, 21, 2ರ ಬಳಿ ಹೆಚ್ಚಿನ ಪಾದರಕ್ಷೆಗಳು ಕಂಡು ಬಂದಿದ್ದು, ಸಿಬ್ಬಂದಿ ಗುರುವಾರ ಮಧ್ಯಾಹ್ನದವರೆಗೂ ಚಪ್ಪಲಿಗಳನ್ನು ಸಂಗ್ರಹಿಸುವ ಕೆಲಸವನ್ನೆ ಮಾಡಲಾಗಿದೆ. ಇದೇ ಜಾಗದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಸಾವನ್ನಪ್ಪಿದ್ದರು. ಸರಿಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಇದೇ ಜಾಗದಲ್ಲಿ ಸೇರಿದ್ದಕ್ಕೆ ದುರಂತ ಸಂಭವಿಸಿದೆ.

Comments are closed.