Home News Chikkodi: ಹಿಂದೂ ಸಂಪ್ರದಾಯದಂತೆ ಮುಸ್ಲಿಮರಿಂದ ಎತ್ತಿನ ಅಂತ್ಯಸಂಸ್ಕಾರ!!

Chikkodi: ಹಿಂದೂ ಸಂಪ್ರದಾಯದಂತೆ ಮುಸ್ಲಿಮರಿಂದ ಎತ್ತಿನ ಅಂತ್ಯಸಂಸ್ಕಾರ!!

Hindu neighbor gifts plot of land

Hindu neighbour gifts land to Muslim journalist

Chikkodi : ಮುಸ್ಲಿಂ ರೈತರು ಒಬ್ಬರ ‘ಹನುಮ’ ಎಂಬ ಎತ್ತು ಶುಕ್ರವಾರ ಮೃತಪಟ್ಟಿದ್ದು, ಅದಕ್ಕೆ ಗೌರವಪೂರ್ವಕವಾಗಿ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ-ವಿಧಾನ ಅನುಸರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಹೌದು, ಚಿಕ್ಕೋಡಿಯ ಇಲ್ಲಿನ ಹಾಲಟ್ಟಿ ಬಡಾವಣೆಯ ರೈತ ತಾಜುದ್ದೀನ್ ಜಾಡವಾಲೆ ಎಂಬುವವರ ಹನುಮ ಎತ್ತು ಸಾವನ್ನಪ್ಪಿದ ಕಾರಣ ಅದಕ್ಕೆ ಗೌರವಪೂರ್ವಕವಾಗಿ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ-ವಿಧಾನ ಅನುಸರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ರೈತ ತಾಜುದ್ದೀನ್ ಜಾಡವಾಲೆ ಅವರ 22 ವರ್ಷಗಳ ಹಿಂದೆ ಮಹಾರಾಷ್ಟ್ರದ ಕರಸುಂಡಿ ಗ್ರಾಮದಿಂದ ತಾಜುದ್ದೀನ್‌ ಅವರು ಎರಡು ಹೋರಿ ಕರುಗಳನ್ನು ಖರೀದಿಸಿದ್ದರು. ಒಂದಕ್ಕೆ ರಾಜಾ, ಇನ್ನೊಂದಕ್ಕೆ ಹನುಮ ಎಂದು ಹೆಸರಿಟ್ಟಿದ್ದರು. ಅವುಗಳ ನೆರವಿನಿಂದ ಐದೂವರೆ ಎಕರೆ ಜಮೀನಿಲ್ಲಿ ಕೃಷಿ ಮಾಡುತ್ತಿದ್ದರು.

2022ರ ಸೆಪ್ಟೆಂಬರ್‌ನಲ್ಲಿ ರಾಜಾ ಎತ್ತು ಮೃತಪಟ್ಟಿತ್ತು. ರಾಜಾ ಎತ್ತಿಗೂ ಹಿಂದೂ ಸಂಪ್ರದಾಯದಂತೆ ತಮ್ಮ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಈಗ ಸಾವನ್ನಪ್ಪಿದ ಹನುಮ ಎತ್ತಿಗೂ ರಾಜಾ ಪಕ್ಕದಲ್ಲೇ ಮಣ್ಣು ಮಾಡಿದರು.

ಇನ್ನು ತಾಜುದ್ದೀನ್ ಜಾಡವಾಲೆ ಮಾತನಾಡಿ ರೈತಬರುವ ಶ್ರಾವಣ ಮಾಸದಲ್ಲಿ ಎರಡೂ ಎತ್ತುಗಳಿಗೆ ಪುಟ್ಟ ದೇವಸ್ಥಾನ ಕಟ್ಟಿಸಿ ಪೂಜೆ ಮಾಡುತ್ತೇವೆ. ಎತ್ತುಗಳು ನಮ್ಮ ಕುಟುಂಬಕ್ಕೆ ದೇವರ ಸಮಾನ ಎಂದರು.