Chinnaswamy Stadium Stampede: ಬೆಂಗಳೂರು ಕಾಲ್ತುಳಿತ ಪ್ರಕರಣ: ತೀವ್ರಗೊಂಡ ತನಿಖೆ-25 ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್

Chinnaswamy Stadium Stampede: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ 11 ಜನ ಸಾವನ್ನಪ್ಪಿದ್ದು ಇಡೀ ರಾಜ್ಯ ಸರಕಾರದ ವಿರುದ್ಧ ಭುಗಿಲೆದ್ದಿದೆ. ಇನ್ನೊಂದು ಕಡೆ ಸರಕಾರ ಜಿಲ್ಲಾಧಿಕಾರಿಗಳ ನೇತೃತ್ವದ ತನಿಖೆಗೆ ಸೂಚನೆ ಮಾಡಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ ತನಿಖೆ ಪ್ರಾರಂಭ ಮಾಡಿದ್ದಾರೆ.

ಬೌರಿಂಗ್, ಪೋರ್ಟಿಸ್, ಮಣಿಪಾಲ್ ಮತ್ತು ವೈದೇಹಿ ಆಸ್ಪತ್ರೆಗಳಲ್ಲಿ ಎಷ್ಟು ಗಾಯಾಳುಗಳು ಅಡ್ಮಿಟ್ ಆಗಿದ್ರು, ಎಷ್ಟು ಮಂದಿ ಡಿಸ್ಚಾರ್ಜ್ ಆದರು? ಎಷ್ಟು ಡೆತ್ ಆಗಿದೆ? ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಬೆಂಗಳೂರಿನ ಈ ನಾಲ್ಕು ಆಸ್ಪತ್ರೆಗಳಿಂದ ಪಡೆದಿದ್ದಾರೆ. ಇದರ ಜೊತೆಗೆ ಬೆಂಗಳೂರು ನಗರದ ಜಿಲ್ಲಾಧಿಕಾರಿ 25 ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್ ನೀಡಿದ್ದಾರೆ. ಜೂನ್ 11 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.
ಗಾಯಾಳುಗಳಿಂದ ಘಟನೆಗೆ ಕಾರಣ ಏನು? ಯಾವ ರೀತಿ ಸಮಸ್ಯೆ ಆಯಿತು ಎನ್ನುವ ಮಾಹಿತಿ ಪಡೆಯಲಿದ್ದಾರೆ. ತನಿಖಾ ವರದಿಯಲ್ಲಿ 15 ದಿನಗಳ ಒಳಗೆ ಸಲ್ಲಿಕೆ ಮಾಡಬೇಕು.
Comments are closed.