Home News Zepto: ಝೆಪ್ಟೋ ಇಂದ ಆರ್ಡರ್ ಮಾಡಿದ ಮ್ಯಾಗಿಯಲ್ಲಿ ಹುಳಗಳು: ಇನ್ಸ್ಟಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಣ...

Zepto: ಝೆಪ್ಟೋ ಇಂದ ಆರ್ಡರ್ ಮಾಡಿದ ಮ್ಯಾಗಿಯಲ್ಲಿ ಹುಳಗಳು: ಇನ್ಸ್ಟಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಣ ಮರುಪಾವತಿ ಮಾಡಿದ ಝೆಪ್ಟೋ

Hindu neighbor gifts plot of land

Hindu neighbour gifts land to Muslim journalist

Zepto: ಝೆಪ್ಟೊ ಕೆಫೆಯಿಂದ ಆರ್ಡರ್ ಮಾಡಿದ ಮ್ಯಾಗಿ ಪ್ಯಾಕೆಟ್‌ನಲ್ಲಿ ಹುಳಗಳು ಸಿಕ್ಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ.

ಸುಖ್‌ಮೀತ್ ಕೌರ್ ಎಂಬ ಸೋಶಿಯಲ್ ಮೀಡಿಯಾ ಇನ್ಲ್ಯೂಯೆನ್ಸರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆಯುತ್ತ, ಒಂದು ಮ್ಯಾಗಿ ಖರೀದಿಸಿದರೆ ಇನ್ನೊಂದು ಉಚಿತ, ಜೊತೆಗೆ ಹುಳಗಳು ಸಹ ಉಚಿತ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಹಾಗೂ ಈ ಪೋಸ್ಟ್ ಅನ್ನು ಇಲ್ಲಿಯವರೆಗೆ 2.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದೇ ಸಮಯದಲ್ಲಿ, ಝೆಪ್ಟೋದ ಅಧಿಕೃತ ಇನ್‌ಸ್ಟಾಗ್ರಾಮ್ ನಿಂದ ಪ್ರತಿಕ್ರಿಯೆ ಕೂಡ ಬಂದಿದ್ದು, ಝೆಪ್ಟೋ ಆಹಾರದ ಗುಣಮಟ್ಟವನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಕಾಮೆಂಟ್ ಮಾಡಿದ್ದು, ಝೆಪ್ಟೋ ಆರ್ಡರ್ ವಿವರಗಳನ್ನು ಪಡೆದಿರುತ್ತಾರೆ. ಹಾಗೂ ಇದಾದ ನಂತರ ತನಗೆ ಮರುಪಾವತಿ ಸಿಕ್ಕಿದೆ ಎಂದು ಮಹಿಳೆಯು ಪ್ರತಿಕ್ರಿಯಿಸಿದ್ದಾರೆ.