Kapu: ಕಾಪುವಿನಲ್ಲಿ ಡಿವೈಡರ್ ಮೇಲೇರಿ ಬಂದ ಕಾರು: ಮೂವರಿಗೆ ಗಾಯ!!

Kapu: ಡ್ರೈವರ್ ನ ಕಂಟ್ರೋಲ್ ತಪ್ಪಿ ಕಾರೊಂದು ಡಿವೈಡರ್ ಮೇಲೇರಿದ ಘಟನೆ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಉದ್ಯಾವರದ ಕಿಯಾ ಶೋರೂಂ ಸಮೀಪ ನಡೆದಿದೆ.

ಮಂಗಳೂರಿನಿಂದ ಉಡುಪಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದೆ. ಕ್ರಾಶ್ ಗಾರ್ಡ್ ಸಹಿತ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Comments are closed.