Sullia: ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ 26 ನೇ ವಾರ್ಷಿಕ ಮಹಾಸಭೆ!

Share the Article

Sullia: ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ 26 ನೇ ವಾರ್ಷಿಕ ಮಹಾಸಭೆ ಮತ್ತು ಕಾನೂನು ಮಾಹಿತಿ ಕಾರ್ಯಗಾರವು ಮೇ.25 ರಂದು ವಿಷ್ಣು ಸರ್ಕಲ್ ನಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಎಂ. ಮಲ್ಲೇಶ್ ಬೆಟ್ಟಂಪಾಡಿ ಯವರು ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಉದ್ಯಮಿ ಕೆ.ಕೃಷ್ಣ ಕಾಮತ್ ಅರಂಬೂರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್‌ ಸದಸ್ಯರು, ದೃಷ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕೇರಿ ವಿದ್ಯಾರ್ಥಿ ವೇತನ ವಿತರಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಕಾನೂನು ವಿಚಾರವಾಗಿನ್ಯಾಯವಾದಿ ಎಂ.ವೆಂಕಪ್ಪ ಗೌಡ ಮತ್ತು ನ್ಯಾಯವಾದಿ ಹರೀಶ್ ಬೂಡುಪನ್ನೆ ಕಾನೂನು ಕುರಿತು ಮಾಹಿತಿ ನೀಡಿದರು.

ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ದಿನಾಕರ ಕುಲಾಲ್‌, ಜಿಲ್ಲಾ ಕಾರ್ಯದರ್ಶಿ ರಾಜ್ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಳ್ಯ ಸೇವಾ ಭಾರತಿ ಸದಸ್ಯ, ರಕ್ತದಾನಿ ಸಮಾಜಸುಳ್ಯ ಸೇವಾ ಭಾರತಿ ಸದಸ್ಯ, ರಕ್ತದಾನಿ ಸಮಾಜ ಸೇವಕ ಶರತ್ ಬಿ.ಎಸ್.ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸರಕಾರಿ ಶಾಲೆಯಲ್ಲಿ ಓದುತ್ತಿರುವ ಸಂಘದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.ಬೊಳುಬೈಲಿನ ಶ್ರೀ ಮೂಕಾಂಬಿಕಾ ಅಟೋ ಡೀಸಲ್ ವರ್ಕ್ಸ್ ಮಾಲಕ ದಾಮೋದರ ಪರಮಂಡಲ ರವರು ನೂತನ ಪೋರ್ಡಿಯಂ ನ್ನು ಸಂಘಕ್ಕೆ ಕೊಡುಗೆಯಾಗಿ ನೀಡಿದರು. ಕು.ಮೌಲ್ಯ ಜೆ ಪ್ರಾರ್ಥಿಸಿದರು. ಎಂ.ಮಲ್ಲೇಶ್‌ ಬೆಟ್ಟಂಪಾಡಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಮಧುಚಂದ್ರ ಪಂಜ ಸನ್ಮಾನ ಪತ್ರ ವಾಚಿಸಿದರು.

ಜತೆ ಕಾರ್ಯದರ್ಶಿ ವಾಸುದೇವ ಜಾಲ್ಲೂರು ವಂದಿಸಿದರು. ಗೌರವಾಧ್ಯಕ್ಷ ಗೋಪಾಲ ಎಸ್‌. ನಡುಬೈಲು ಮತ್ತು ಸುದ್ದಿ ವರದಿಗಾರ ಶಿವಪ್ರಸಾದ್‌ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದ.ಕ ಮತ್ತು ಉಡುಪಿ, ವಿಟ್ಲ,ಮಂಗಳೂರು, ಕಡಬ, ಪುತ್ತೂರು ವಲಯದ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.

Comments are closed.