ಈ ಸಲ ತಪ್ಪು ನಮ್ದೇ! : RCB ಸಂಭ್ರಮಾಚರಣೆ ಹೆಸರಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಆಸೆಗೆ ಬಿದ್ದು ದಿಕ್ಕೆಟ್ಟ ಗ್ಯಾರಂಟಿ ಸರ್ಕಾರ!
ಈ ಸಲ ತಪ್ಪು ನಮ್ದೇ! ಎನ್ನುವ ಡಿಕೆಶಿ ಸಿದ್ದು, ಹೊಣೆ ಹೊತ್ತು ರಾಜಿನಾಮೆ ಕೊಡ್ತಾರಾ? *ದುರಂತ ಸಂಭ್ರಮ* ಕ್ಕೆ ಸರ್ಕಾರದ ವಿರುದ್ಧ ಎಲ್ಲೆಡೆಯಿಂದ ಆಕ್ರೋಶ!

ಮಂಗಳೂರು: ಆರ್ ಸಿಬಿ ಗೆದ್ದ ಸಂಭ್ರಮಾಚರಣೆಯ ಕ್ರೆಡಿಟನ್ನು ತಾನು ಪಡೆದುಕೊಂಡು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಷ್ಟೇ ದಿಢೀರನೆ ಮುಜಾಗೃತೆಯಿಲ್ಲದ ತಲೆಬುಡವಿಲ್ಲದ ‘ದುರಂತ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಿ 11 ಮಂದಿ ಅಮಾಯಕ ಜೀವಗಳ ಬಲಿಗೆ ಕಾರಣವಾದ ಗ್ಯಾರಂಟಿ ಕೈ ಸರ್ಕಾರ ಇದೀಗ ಅಕ್ಷರಶಃ ದಿಕ್ಕೆಟ್ಟು ಹೋಗಿದೆ.

ಬಿಟ್ಟಿ ಭಾಗ್ಯಗಳ ಹೆಸರಲ್ಲಿ ತಾನು ದೊಡ್ಡ ಹೆಸರು ಮಾಡಿದ್ದೇನೆಂದು ಬೀಗುತ್ತಿರುವ ಕೈ ಸರ್ಕಾರ RCB ಗೆದ್ದ ಸಂಭ್ರಮಾಚರಣೆ ಹೆಸರಲ್ಲೂ ತಾನು ಇಡೀ ರಾಜ್ಯ ಮತ್ತು ದೇಶದ ಗಮನ ಸೆಳೆದು ಸುಲಭವಾಗಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಬಹುದೆಂಬ ಆಸೆಗೆ ಬಲಿಬಿದ್ದು35 ಸಾವಿರ ಜನ ತುಂಬುವುದಕ್ಕಷ್ಟೇ ಅವಕಾಶವಿರುವ ಸ್ಟೇಡಿಯಂನಲ್ಲಿ 2 ಲಕ್ಷ ಕ್ಕೂ ಅಧಿಕ ಮಂದಿಯನ್ನು ತುರುಕಿ ತುಂಬಿಸುವ ಯಾವುದೇ ಪೂರ್ವಸಿದ್ಧತಾ ಯೋಜನೆ ಹಾಗೂ ಮುಂದಾ ಲೋಚನೆಯಿಲ್ಲದೆ ಈ ತಲೆಬುಡವಿಲ್ಲದ ಅವಸರದ ಕಾರ್ಯಕ್ರಮವನ್ನು ಆಯೋಜಿಸಿತ್ತೆನ್ನಲಾಗುತ್ತಿದೆ. ಪರಿಣಾಮವಾಗಿ ಈ ಬೇಜವಾಬ್ದಾರಿ ಕಾರ್ಯಕ್ರಮದಿಂದಾಗಿ ಸುಮಾರು 11 ಮಂದಿ ಅಮಾಯಕರು ವಿನಾ ಕಾರಣ ದುರಂತ ಸಾವನ್ನು ಕಾಣುವoತಾಗಿದೆ. ಹೀಗಾಗಿ ಈ ತಲೆಬುಡವಿಲ್ಲದ ಕಾರ್ಯಕ್ರಮ ನಡೆಸಲು ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಂಜಾಗ್ರತಾರಹಿತವಾಗಿ ‘ದುರಂತ ಸಂಭ್ರಮ’ದ ಆಯೋಜನೆಯನ್ನು ಮಾಡಲು ಮುಂದಾಗಿ ನಿಂತಲ್ಲಿ ನಿಲ್ಲಲಾರದೆ ತುದಿಗಾಲಲ್ಲೇ ನಿಂತು ಅತ್ತಿತ್ತ ಓಡಾಡುತ್ತಿದ್ದ ಡಿಕೇಶಿಯೇ ಇದರ ಹೊಣೆಹೊತ್ತು ರಾಜಿನಾಮೆ ಕೊಡಬೇಕೆನ್ನುವ ಕೂಗು, ಒತ್ತಾಯಗಳು ಇದೀಗ ಎಲ್ಲೆಡೆಯಿಂದ ಕೇಳಿ ಬರುತ್ತಿವೆ.
ಆದರೆ ಈ ನಡುವೆ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿ ಮೃತರಿಗೆ ಮತ್ತು ಗಾಯಾಳುಗಳಿಗೆ ಒಂದಷ್ಟು ಹಣ,ಪರಿಹಾರಗಳನ್ನು ನೀಡಿದ ಮಾತ್ರಕ್ಕೆ ಸರ್ಕಾರದ ಮತ್ತು ತಮ್ಮ ಹೊಣೆಗಾರಿಕೆ ಮುಗಿದು ಹೋಯಿತು ಎಂಬ ಭಾವನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಇದ್ದಿರಬಹುದಾದರೂ ಘಟನೆಯ ಉದ್ದೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸರ್ಕಾರ ಬಿಟ್ಟಿ ಪ್ರಚಾರ ಗಿಟ್ಟಿಸಿ ಕೊಳ್ಳಲೆಂದೇ ಹಾಗೂ ಅಮಾಯಕರನ್ನು ಬಲಿ ಪಡೆಯಲೆಂದೇ ಈ ರೀತಿ ತಲೆಬುಡವಿಲ್ಲದ ಬೇಜವಾಬ್ದಾರಿಯುತವಾದ ಈ ಕಾರ್ಯಕ್ರಮವನ್ನು ಆಯೋಜಿಸಿದಂತೆ ಭಾಸವಾಗುತ್ತಿದೆ. ಇದೇ ಕಾರಣದಿಂದಾಗಿಯೇ ವಿನಾ ಕಾರಣ 11 ಜೀವಗಳು ದುರಂತ ಸಾವನ್ನಪ್ಪಿರುವುದು ಸ್ಪಷ್ಟವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಸಲ ಕಪ್ಪು ನಮ್ದೇ! ಈ ಸಲ ತಪ್ಪು ನಮ್ದೇ!
ಹೀಗಾಗಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ದುರ್ಘಟನೆಯ ಹೊಣೆ ಹೊತ್ತು ತಕ್ಷಣವೇ ರಾಜಿನಾಮೆ ಕೊಡಬೇಕೆಂಬುದು ವಿರೋಧ ಪಕ್ಷಗಳ ಒತ್ತಾಯವಾಗಿದೆ.
ನಿನ್ನೆಯ ಘಟನೆಯಲ್ಲಿ ಕಾನೂನು ಪಾಲಿಸುವುದು ಕಷ್ಟ ಅಂತ ಕಾಂಗ್ರೆಸ್ ಸರಕಾರಕ್ಕೆ ಮೊದಲೇ ಗೊತ್ತಿತ್ತು. ಅದಕ್ಕಾಗಿಯೇ ಮೆರವಣಿಗೆಗೆ ಸರ್ಕಾರ ಪರ್ಮಿಷನ್ ಕೊಟ್ಟಿರಲಿಲ್ಲ. ಆದರೆ ಸಂಭ್ರಮಾಚರಣೆ ಮಾಡಲು ಅವಕಾಶ ಕೊಟ್ಟು ಬಿಡ್ತು. ಆದರೆ ಕಟ್ಟುನಿಟ್ಟಿನ ಲಿಮಿಟ್ ಹಾಕಿಕೊಳ್ಳಲು ಮರೆತು ಬಿಡ್ತು. ಒಂದು ರೇಂಜ್ ಗಿಂತ ಹೆಚ್ಚಿನ ಜನ ಬಂದ್ರೆ ಏನು ಮಾಡೋದು? ಎಲ್ಲಿಂದ, ಯಾವ ಸರ್ಕಲ್ ನಲ್ಲಿಯೇ ಜನರನ್ನು ವಾಪಸ್ ಕಳಿಸೋದು? ಅಂತ ಯಾರೂ ಯೋಚಿಸಲಿಲ್ಲ. ಅಲ್ಲದೆ ಗರಿಷ್ಠ 50 ಸಾವಿರ ಜನರಿಗೆ ಅವಕಾಶ ನೀಡಬೇಕಾದ ಕಡೆ 2 ಲಕ್ಷ ಜನರ ಆಗಮನಕ್ಕೆ ಡೋರ್ ಓಪನ್ ಇಡಲಾಯಿತು. ಅಭಿಮಾನದಲ್ಲಿ ಭ್ರಮಿತ ಜನ ಹೋ ಅಂತ ನುಗ್ಗಿದರು. ಕಾಲ್ತುಳಿತ ಆಗಿಯೇ ಹೋಯ್ತು. 11 ಜನ ಅಪ್ಪಚ್ಚಿಯಾದರು.
ವಿಜಯೇಂದ್ರರ ಹೇಳಿಕೆಯೇ ಎಡ್ಜೆಸ್ಟ್ ಮಂಟ್ ರಾಜಕೀಯಕ್ಕೊಂದು ಸ್ಯಾಂಪಲ್!
‘ದುರಂತ ಸಂಭ್ರಮ’ದ ದುರ್ಘಟನೆಯ ಬಗ್ಗೆ ಬಿಜೆಪಿ ಸೇರಿದಂತೆ ಉಳಿದೆಲ್ಲ ಪಕ್ಷಗಳ ನಾಯಕರು ತೀವ್ರ ಖೇದ ವ್ಯಕ್ತ ಪಡಿಸಿ ಮುಂಜಾಗ್ರತಾ ರಹಿತ ಬೇಜವಾಬ್ದಾರಿ ಕಾರ್ಯಕ್ರಮವನ್ನು ಆಯೋಜಿಸಿ 11 ಜನ ಅಮಾಯಕರ ಸಾವಿಗೆ ಸರ್ಕಾರವೇ ಕಾರಣವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ಅದರ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತ್ರ ಈ ದುರ್ಘಟನೆಯ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿಯ ರಾಜಿನಾಮೆಗೆ ಪಟ್ಟು ಹಿಡಿದು ಒತ್ತಾಯಿಸುವ ಬದಲು ಘಟನೆ ಅಷ್ಟೇನೂ ಗಂಭೀರ ಸ್ವರೂಪದಲ್ಲವೆಂಬ ರೀತಿಯಲ್ಲಿ ಕೇವಲ ನ್ಯಾಯಾಂಗ ತನಿಖೆ ನಡೆಸಲು ಮಾತ್ರ ಕಾಟಾಚಾರದ ಹೇಳಿಕೆಯನ್ನಷ್ಟೇ ನೀಡಿದ್ದಾರೆನ್ನಲಾಗಿದೆ.
ಒಂದು ವೇಳೆ ಬಿಜೆಪಿಯ ಆಡಳಿತವಿದ್ದು ಕಾಂಗ್ರೆಸ್ ವಿರೋಧ ಪಕ್ಷದಲ್ಲಿರುತ್ತಿದ್ದರೆ, ಕಾoಗ್ರೆಸ್ ವಿಜಯೇಂದ್ರನ ಹಾಗೆ ಕೇವಲ ಹೇಳಿಕೆ ಕೊಟ್ಟು ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳುತ್ತಿತ್ತೆ ಎಂಬುದು ಬಿಜೆಪಿ ಸೇರಿದಂತೆ ರಾಜ್ಯದ ಬಹುತೇಕರ ಮಾತಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಇದು ವಿಜಯೇಂದ್ರರ ಎಡ್ಜೆಸ್ಟ್ಮೆoಟ್ ಪಾಲಿಟಿಕ್ಸ್ ನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎನ್ನುವ ಆರೋಪಗಳು ಇದೀಗ ಸ್ವತಃ ಬಿಜೆಪಿಯಿಂದಲೇ ಮತ್ತೊಮ್ಮೆ ವ್ಯಾಪಕವಾಗಿ ಕೇಳಿಬರುತ್ತಿವೆ ಎನ್ನಲಾಗಿದೆ.
Comments are closed.