Kumbale: ಯುವಕನನ್ನು ಅಪಹರಿಸಿ 18.46 ಲಕ್ಷ ಅಪಹರಣ: ಪುತ್ತೂರು ಮೂಲದ ಇಬ್ಬರ ಬಂಧನ!

Share the Article

Kumbale: ಮುಳಿಯಡ್ಕ ರಹ್ಮಾನಿಯ ಮಂಜಿಲ್‌ನ ಅಬ್ದುಲ್ ರಶೀದ್ (32) ಅವರನ್ನು ಮೇ 6ರಂದು ಹಾಡಹಗಲೇ ಕುಂಬಳೆ (Kumbale) ಪೇಟೆಯಿಂದ ಕಾರಿನಲ್ಲಿ ಅಪಹರಿಸಿ 18,46,127 ರೂ. ಲಪಟಾಯಿಸಿದ ಪ್ರಕರಣದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿ ನಿವಾಸಿ ಅನ್ನೀಫ್ (31) ಮತ್ತು ಕಡಬ ಮರ್ದಾಳದ ಇರ್ಫಾನ್ (25) ಬಂಧಿತರು.

ಆರೋಪಿಗಳು ಪುತ್ತೂರಿನಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಬಂಧಿಸಿದರು. ಆರೋಪಿಗಳು ರಶೀದ್ ಅವರಿಗೆ ಹಲ್ಲೆಗೈದು ಬೆದರಿಕೆಯೊಡ್ಡಿ ಹಣವನ್ನು ತಮ್ಮ ಖಾತೆಗೆ ಬದಲಾಯಿಸಿಕೊಂಡ ಬಳಿಕ ಪೆರ್ಮುದೆ ಪೇಟೆಯಲ್ಲಿ ಇಳಿಸಿ ಪರಾರಿಯಾಗಿದ್ದರು ಎನ್ನಲಾಗಿದೆ.

Comments are closed.