Home News G Parameshwara: ಕಾಲ್ತುಳಿತ ಪ್ರಕರಣ: ಬೃಹತ್‌ ಕಾರ್ಯಕ್ರಮ, ಸಮಾರಂಭಗಳಿಗೆ ಎಸ್‌ಒಪಿ: ಗೃಹ ಸಚಿವ ಪರಮೇಶ್ವರ್‌ ಘೋಷಣೆ

G Parameshwara: ಕಾಲ್ತುಳಿತ ಪ್ರಕರಣ: ಬೃಹತ್‌ ಕಾರ್ಯಕ್ರಮ, ಸಮಾರಂಭಗಳಿಗೆ ಎಸ್‌ಒಪಿ: ಗೃಹ ಸಚಿವ ಪರಮೇಶ್ವರ್‌ ಘೋಷಣೆ

Dr G parameshwar

Hindu neighbor gifts plot of land

Hindu neighbour gifts land to Muslim journalist

G Parameshwara: ಆರ್‌ಸಿಬಿ ಐಪಿಎಲ್‌ ವಿಯೋತ್ಸವ ಕಾರ್ಯಕ್ರಮದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟ ನಂತರ ಕರ್ನಾಟಕ ಸರಕಾರ ಇದೀಗ ಎಚ್ಚೆತ್ತುಕೊಂಡಿದ್ದು, ಇಂಥ ಬೃಹತ್‌ ಕಾರ್ಯಕ್ರಮಗಳಿಗೆ ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ರೂಪಿಸಲು ಮುಂದಾಗಿದೆ.

ಇಂದು ಬೆಂಗಳೂರಿನಲ್ಲಿ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಬೃಹತ್ ಸಭೆ-ಸಮಾರಂಭಗಳು, ಕಾರ್ಯಕ್ರಮಗಳು, ಸಂಭ್ರಮಾಚರಣೆಗಳಿಗೆ ಎಸ್​​ಒಪಿ ರೂಪಿಸಲಾಗುವುದು ಎಂದು ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ತಿಳಿಸಿದ್ದಾರೆ.

ಇಂತಹ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ, ಗೃಹ ಇಲಾಖೆ ಹೊಸ ಎಸ್​​ಒಪಿ ರೂಪಿಸಲಿವೆ. ಇನ್ನು ಮುಂದೆ ಯಾವುದೇ ಬೃಹತ್ ಕಾರ್ಯಕ್ರಮಗಳು, ಸಭೆಗಳು ಮತ್ತು ಆಚರಣೆಗಳನ್ನು ಪೊಲೀಸ್ ಇಲಾಖೆ ಹೊರಡಿಸಿದ ನಿರ್ದೇಶನಗಳ ಚೌಕಟ್ಟಿನೊಳಗೆ ನಡೆಸಬೇಕೆಂದು ನಾವು ಸೂಚನೆಗಳನ್ನು ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.