Home News Belthangady: ಲಾಯಿಲ: ಪುತ್ರಬೈಲುವಿನಲ್ಲಿ ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು!

Belthangady: ಲಾಯಿಲ: ಪುತ್ರಬೈಲುವಿನಲ್ಲಿ ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು!

Hindu neighbor gifts plot of land

Hindu neighbour gifts land to Muslim journalist

Belthangady: ಬೆಳ್ತಂಗಡಿ (Belthangady) ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ಪಿಕಪ್ ವಾಹನವೊಂದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾಯಿಲದಲ್ಲಿ ಬೆಳ್ತಂಗಡಿ ಠಾಣಾ ಉಪ ನಿರೀಕ್ಷಕ ಜೂ. 2ರಂದು ರೌಡ್ಸ್ ನಲ್ಲಿದ್ದಾಗ ಮರಳು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಗಮನಿಸಿದ್ದು ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ.

ಪಿಕಪ್ ವಾಹನ ಹಾಗೂ ಅದರಲ್ಲಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.