Kerala: ಇನ್ಮುಂದೆ ಅಂಗನವಾಡಿ ಮಕ್ಕಳಿಗೆ ಉಪ್ಪಿಟ್ಟಿನ ಬದಲಿಗೆ ಎಗ್ ಬಿರಿಯಾನಿ ಹಾಗೂ ಸೋಯಾ ಕರಿ

Kerala: ಅಂಗಡಿಗಳಲ್ಲಿ ಸಾಮಾನ್ಯ ಮಕ್ಕಳಿಗೆ ಕಾಳು-ಬೇಳೆಗಳಿಂದ ಮಾಡಿದ ಪದಾರ್ಥ ಹಾಗೂ ಉಪ್ಪಿಟ್ಟು ನೀಡುತ್ತಾರೆ, ಆದರೆ ಇದೀಗ ಕೇರಳಾದಲ್ಲಿ ಉಪ್ಪಿಟ್ಟಿನ ಬದಲಿಗೆ ಎಗ್ ಬಿರಿಯಾನಿ ಹಾಗೂ ಸೋಯಾ ಕರಿ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕೇರಳ ಸರ್ಕಾರವು ಅಂಗನವಾಡಿಗಳಲ್ಲಿ ಆಹಾರ ಮೆನುವನ್ನು ಪರಿಷ್ಕರಿಸಿದ್ದು, ಮತ್ತು ಅದರಲ್ಲಿ ಮೊಟ್ಟೆ ಬಿರಿಯಾನಿಯನ್ನು ಸೇರಿಸಿದೆ. ಮೂರು ವರ್ಷದ ಬಾಲಕನೊಬ್ಬ ತನ್ನ ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ಕೇಳುತ್ತಿರುವ ವೀಡಿಯೊ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ನಂತರ ಪರಿಷ್ಕೃತ ಮೆನುವಿನ ಘೋಷಣೆ ಬಂದಿದೆ ಎನ್ನಲಾಗುತ್ತಿದೆ.
ಮಂಗಳವಾರ ಹೊಸ ಮನುವಿನ ಘೋಷಣೆಯಾಗಿದ್ದು, ಮೊಟ್ಟೆ ಬಿರಿಯಾನಿಯ ಜೊತೆಗೆ ಪುಲಾವ್, ದಾಲ್ ಪಾಯಸಂ, ಸೋಯಾ ಡ್ರೈ ಕರಿ ಮತ್ತು ನ್ಯೂಟ್ರಿ ಲಡ್ಡುಗಳಂತಹ ಭಕ್ಷ್ಯಗಳು ಕೂಡ ಸೇರಿವೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯ-ಚಾಲಿತ ಶಿಶುಪಾಲನಾ ಕೇಂದ್ರಗಳಿಗೆ ಏಕೀಕೃತ ಮೆನುವನ್ನು ಜಾರಿಗೆ ತರುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
Comments are closed.