ತನಿಖಾ ನೆಪದಲ್ಲಿತಡ ರಾತ್ರಿ ವಿದ್ಯಾಸಂಸ್ಥೆ ಮುಖ್ಯಸ್ಥರ ಮನೆಯ ಕದತಟ್ಟಿದ ಪೊಲೀಸರು!
ಮೇಲಧಿಕಾರಿಗಳ ಆದೇಶ ವೆಂದು ಫೋಟೋ ಕ್ಲಿಕ್ಕಿಸಿ ಹೊರ ನಡೆದ ಪೊಲೀಸರು!

Uppinangady: ದಕ ಜಿಲ್ಲೆಯಾದ್ಯಂತ ಪೊಲೀಸರ ತಡ ರಾತ್ರಿ ಕಾರ್ಯಾಚರಣೆಗಳ ವಿರುದ್ಧ ಎಲ್ಲೆಡೆಯಿಂದ ಭಾರೀ ಅಸಮಾಧಾನ, ಆಕ್ರೋಶ,ಖಂಡನೆಗಳು ವ್ಯಕ್ತವಾಗುತ್ತಿರುವುದರ ಮಧ್ಯೆಯೇ ಪೊಲೀಸರು ಈ ರಾತ್ರಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕು ಗೊಳಿಸುತ್ತಲೇ ಇದ್ದಾರೆ.ಇದರಂತೆ ಕಳೆದ ಸೋಮವಾರ ಉಪ್ಪಿನಂಗಡಿಯ ಶ್ರೀ ರಾಮ ವಿದ್ಯಾ ಸಂಸ್ಥೆಯ ಸಂಚಾಲಕರಾಗಿದ್ದು ಮೆಡಿಕಲ್ ಶಾಪ್ ವೃತ್ತಿ ನಡೆಸುತ್ತಿರುವ ಯು.ಜಿ.ರಾಧಾ ಎಂಬವರ ಮೇಲೆ ಯಾವುದೇ ಕೇಸು ದಾಖಲಾಗದಿದ್ದರೂ ಅವರು ಆರ್ ಎಸ್ ಎಸ್ ಸಂಚಾಲಕರೆಂಬ ಏಕೈಕ ಕಾರಣಕ್ಕೆ ಮೊನ್ನೆ ಅವರ ಮನೆಗೆ ತಡರಾತ್ರಿ 11.58.ರ ಸುಮಾರಿಗೆ ಬಂದ ಪೊಲೀಸರು ಜಿಪಿಎಸ್ ಫೋಟೋ ತೆಗೆದು 12.07ಕ್ಕೆ ತೆರಳಿ ದ್ದಾರೆನ್ನಲಾಗಿದೆ.54ವರ್ಷ ಪ್ರಾಯದ ಇವರನ್ನು ನಿದ್ದೆಯಿಂದ ಎಬ್ಬಿಸಿ ಪೊಲೀಸರು ಈ ರೀತಿ ಫೋಟೋ ತೆಗೆದು ಕಿರುಕುಳ ಕೊಟ್ಟಿರುವುದರಿಂದ ಮನೆ ಮಂದಿ ತೀವ್ರ ಆತಂಕಕ್ಕೊಳಗಾಗಿದ್ದರೆನ್ನ ಲಾಗಿದೆ. ಅದೇ ರೀತಿ ಪೊಲೀಸರ ಈ ಕ್ರಮಕ್ಕೆ ಉಪ್ಪಿನಂಗಡಿ ಸುತ್ತಮುತ್ತಲೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಧಾ ಅವರು ಶಾಂತಿ ಕಾಪಾಡುವ ನೆಪದಲ್ಲಿ ತಡ ರಾತ್ರಿ ಎನ್ನದೇ ಸಿಕ್ಕಸಿಕ್ಕವರ ಮನೆಗೆ ಮುಂಚಿತವಾಗಿ ಯಾವುದೇ ನೋಟೀಸು ನೀಡದೆ, ಅಥವಾ ಮಾಹಿತಿಯನ್ನೂ ಕೊಡದೆ ಹೆಂಗಸರು ಮಕ್ಕಳು ಇರುವ ಮನೆಗಳಿಗೆ ಈ ರೀತಿ ಪೊಲೀಸರು ಬಂದು ವಿನಾ ಕಾರಣ ಕಿರುಕುಳ ನೀಡುವುದರಿಂದ ಇಲಾಖೆಯ ಶಾಂತಿ ಕಾಪಾಡುವ ಉದ್ದೇಶ ಜನಸಾಮಾನ್ಯರ ನೆಮ್ಮದಿಯನ್ನು ಹಾಳುಮಾಡಿ ಅಶಾಂತಿಗೆ ಕಾರಣವಾಗುತ್ತದೆ. ಇಂತಹಾ ತಲೆಬುಡವಿಲ್ಲದ ಯೋಜನೆ ಮತ್ತು ಯೋಚನೆ ಪ್ರಯೋಜನ ಶೂನ್ಯ ಎಂಬುದನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ಮೊದಲು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
Comments are closed.