Home News RCB : ಐಪಿಎಲ್ ಗೆಲುವು: ವಿಧಾನಸೌಧದಲ್ಲಿ ಆರ್‌ಸಿಬಿ ತಂಡದಕ್ಕೆ ನಡೆಯಲಿದೆ ಭರ್ಜರಿ ಸನ್ಮಾನ –...

RCB : ಐಪಿಎಲ್ ಗೆಲುವು: ವಿಧಾನಸೌಧದಲ್ಲಿ ಆರ್‌ಸಿಬಿ ತಂಡದಕ್ಕೆ ನಡೆಯಲಿದೆ ಭರ್ಜರಿ ಸನ್ಮಾನ – ಆಟಗಾರರ ಭವ್ಯ ಮೆರವಣಿಗೆ

Hindu neighbor gifts plot of land

Hindu neighbour gifts land to Muslim journalist

RCB: ನಿರಂತರ 17 ವರ್ಷಗಳ ಕನಸು, ಸತತ ಪರಿಶ್ರಮದ ಬಳಿಕ ಇದೀಗ ಆರ್ ಸಿಬಿ ತಂಡವು 18ನೇ ಐಪಿಎಲ್ ಪಂದ್ಯ ಆಡಿ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಈ ಹಿನ್ನಲೆ ವಿಧಾನ ಸೌಧದಿಂದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸದ ಮೆರವಣಿಗೆಯನ್ನು ಸರ್ಕಾರ ಆಯೋಜಿಸಿದೆ. ಈ ಮೂಲಕ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಅಭಿನಂದಿಸಿದೆ.

ಆರ್ ಸಿಬಿ ತಂಡವನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನ ಸೌಧದಲ್ಲಿ ಸನ್ಮಾನಿಸಿ, ನಂತರ ಭವ್ಯ ಮೆರವಣಿಗೆ ಮುಖಾಂತರ ಆಟಗಾರರರೊಂದಿಗೆ ಮೆರವಣಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಾಗಲಿದೆ. ಈಗಾಗಲೇ ಆರ್ ಸಿಬಿ ತಂಡ ಅಹಮದಾಬಾದ್ ನಿಂದ ಹೊರಟಿದ್ದು, ಮಧ್ಯಾಹ್ನ 1.30 ರ ಸುಮಾರಿಗೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ವಿಧಾನ ಸೌಧದಲ್ಲಿ ಆರ್ ಸಿಬಿ ತಂಡದ ಎಲ್ಲಾ ಸದಸ್ಯರಿಗೆ, ಆಟಗಾರರಿಗೆ ಸನ್ಮಾನಿಸಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನ ಅಪಾರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ನೋಡಿ ಸಂತಸಪಡಲು ಕಾಯುತ್ತಿದ್ದಾರೆ.